ದಾಂಡೇಲಿ: ಇಲ್ಲಿನ ಮುಖ್ಯ ಬಸ್ ನಿಲ್ದಾಣ ಮಳೆಗೆ ಸೋರುತ್ತಿದೆ.
ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಕೊಡೆ ಬಿಡಿಸಿಕೊಂಡು ಕೂರುತ್ತಿದ್ದಾರೆ. ಮಳೆ ನೀರು ಒಳನುಗ್ಗುವುದರಿಂದ ಸಂಚಾರ ನಿಯಂತ್ರಕರ ಕೊಠಡಿ ಸಹ ತೇವಗೊಂಡಿದೆ. ನೆಲ ಸಹ ನೀರಿನಿಂದ ತುಂಬಿದ್ದು, ನೀರು ಹೊರ ಹಾಕುವುದೇ ಸಾಹಸವಾಗಿದೆ. ಮಳೆ ನೀರಿಗೆ ನೆನೆದು ಬಸ್ ನಿಲ್ದಾಣದ ಗೋಡೆಗಳು ಬಿರುಕು ಮೂಡಿದೆ. ಹೀಗಾಗಿ ಸಿಬ್ಬಂದಿ ಜೊತೆ ಪ್ರಯಾಣಿಕರು ಆತಂಕದಲ್ಲಿದ್ದಾರೆ.