ಶಿರಸಿ: ಸಾಂಪ್ರದಾಯಿಕ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ್ಟ 10 ಮಧ್ಯಾಹ್ನ 3.30ಕ್ಕೆ ಕೈ ಚಕ್ಕುಲಿ ಕಂಬಳ ನಡೆಯಲಿದೆ.
ಮೊದಲು ಗಣೇಶ ಚೌತಿ ಹಿನ್ನಲೆ ಊರವರೆಲ್ಲ ಒಂದುಗೂಡಿ ಕೈಯಲ್ಲಿಯೇ ಚಕ್ಕುಲಿ ಸುತ್ತಿ ಹಬ್ಬವನ್ನು ಸಂಭ್ರಮದಿAದ ಆಚರಿಸುತ್ತಿದ್ದರು. ಕೈಯಲ್ಲಿ ಸುತ್ತಿದ ಚಕ್ಕುಲಿಯ ಋಚಿಯೇ ಬೇರೆ ಎಂದು ಜನ ಹೇಳುತ್ತಿದ್ದರು. ಇದೀಗ ಊರಿನವರೆಲ್ಲ ಸೇರಿ ಚಕ್ಕುಲಿ ಮಾಡುವ ವಿಧಾನ ಕಡಿಮೆಯಾದ ಕಾರಣ ಇದೇ ಪ್ರಥಮ ಬಾರಿಗೆ ಹೆಗಡೆಕಟ್ಟಾ ಸೊಸೈಟಿ ಈ ಕಾರ್ಯಕ್ರಮ ಆಯೋಜಿಸಿದೆ.
ಚಕ್ಕುಲಿ ಮಾತ್ರವಲ್ಲ..
ಈ ಹಬ್ಬದಲ್ಲಿ ಚಕ್ಕುಲಿ ಮಾಡುವುದು ಮಾತ್ರವಲ್ಲ ತಿನ್ನುವ ಸ್ಪರ್ಧೆ ಸಹ ಇದೆ. ಕೈ ಚಕ್ಕುಲಿ ಸುತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಥಳಿಯ ಮಹಿಳೆಯರ ಕರಕುಶಲತೆ ಆರತಿ ತಾಟು, ಮೊಗ್ಗಿನ ಜಡೆ, ಇನ್ನಿತರ ಕಲಾಪ್ರದರ್ಶನ ಸಹ ನಡೆಯಲಿದೆ. ಹಿಮಾಂಕ ಹೆಗಡೆ, ಶಶಾಂಕ ನಾಯ್ಕ ಇನ್ನಿತರ ವಿದ್ಯಾರ್ಥಿಗಳ ಚಿತ್ರಕಲೆಯನ್ನು ನೋಡಲು ಸಾಧ್ಯ.
ಗೋಳಿಕೊಪ್ಪದ ಶರ್ವಾಣಿ ಭಟ್ಟ ಅವರು ವಿವಿಧ ತರಕಾರಿ ಬೀಜ, ಪಿಸ್ತಾ ಸಿಪ್ಪೆಗಳಿಂದಲೇ ತಯಾರಿಸಿದ `ತೇರಿನ ಆರತಿ\’ ಇಲ್ಲಿನ ಮುಖ್ಯ ಆಕರ್ಷಣೆ. ಕೈಯಲ್ಲಿ ಸುತ್ತಿದ ಅತಿ ದೊಡ್ಡ ಚಕ್ಕುಲಿ ಪ್ರದರ್ಶನವೂ ಇರಲಿದೆ. ಊರಿನವರು ಮಾಡಿದ ಚಕ್ಕುಲಿ ಮಾರಾಟಕ್ಕೂ ಸಿಗುತ್ತದೆ. ಇದಕ್ಕೆ ಹೆಸರು ನೋಂದಾಯಿಸಿಕೊಳ್ಳುವವರು 9972382333ಗೆ ಕರೆ ಮಾಡಿ.