ಕುಮಟಾ: ಬಿಜ್ಜುರಿನ ಶಶಿಹಿತ್ತಲಿನಲ್ಲಿ ಬೀದಿ ನಾಯಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಕೋತಿಗೆ ಅಲ್ಲಿನ ಮಂಜುನಾಥ ಗೌಡ ಚಿಕಿತ್ಸೆ ಕೊಡಿಸಿದ್ದಾರೆ.
ಗಾಯಗೊಂಡು ಒದ್ದಾಡುತ್ತಿದ್ದ ಮಂಗನನ್ನು ನೋಡಿದ ಅವರು ಪ್ರಾಣಿಪ್ರಿಯ ಸುಜಯ ಶೆಟ್ಟಿ ಅವರನ್ನು ಸ್ಥಳಕ್ಕೆ ಕರೆಯಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ಅರಣ್ಯಾಧಿಕಾರಿ ಆರ್.ಟಿ.ನಾಯ್ಕ ಈ ವಿಷಯ ಅರಿತು ಅರಣ್ಯ ವೀಕ್ಷಕರಾದ ವೆಂಕಟರಮಣ ಬಂಕಿಕೊಡ್ಲ, ಹೊನ್ನಪ್ಪ ಪಟಗಾರ ಅವರನ್ನು ಸ್ಥಳಕ್ಕೆ ಕಳುಹಿಸಿದರು. ಅವರ ಆ ಕೋತಿಯನ್ನು ಗಂಗೆಕೊಳ್ಳ ನರ್ಸರಿಗೆ ಕೊಂಡೊಯ್ದು ಉಪಚರಿಸಿದರು. ನಂತರ ಅದನ್ನು ಕಾಡಿಗೆ ಬಿಡಲಾಯಿತು.