ಅಂಕೋಲಾ: `ಮಾನವನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಪರಿಹಾರವಿದೆ\’ ಎಂದು ಕಡಲ ವಿಜ್ಞಾನಿ ಹಾಗೂ ಪರಿಸರ ತಜ್ಞ ಡಾ.ವಿ.ಎನ್ ನಾಯಕ ಪ್ರತಿಪಾದಿಸಿದರು.
ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಕಿಸಾನ್ ಸಮಿತಿ, ಯುವ ಭಾರತ ಮತ್ತು ಪತಂಜಲಿ ಮಹಿಳಾ ಯೋಗ ಸಮಿತಿ ಆಶ್ರಯದಲ್ಲಿ ನಡೆದ ಗಿಡಮೂಲಿಕೆ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
`ಮನುಷ್ಯ ಅನಾದಿಕಾಲದಿಂದಲೂ ತನ್ನೆಲ್ಲ ಆರೋಗ್ಯ ಸಮಸ್ಯೆಗಳಿಗೆ ಪ್ರಕೃತಿದತ್ತವಾದ ಗಿಡಮೂಲಿಕೆಗಳಿಂದಲೇ ಪರಿಹಾರ ಕಂಡುಕೊಳ್ಳುತ್ತಾ ಬಂದಿದ್ದಾನೆ. ಹಾಗಾಗಿ ಗಿಡಮೂಲಿಕೆಗಳು ಜೀವಸಂಕುಲದ ಸಂರಕ್ಷಕಗಳು\’ ಎಂದವರು ಹೇಳಿದರು. `ಬೇವು, ತುಳಸಿ, ಗರಿಕೆ, ಒಂದೆಲಗ, ಏಕನಾಯಕ ಮುಂತಾದ ಗಿಡಗಳ ವಿಶೇಷವಾಗಿ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳಿವೆ. ಅಳಿವಿನಂಚಿಗೆ ಸರಿದಿರುವ ಅಶೋಕ ಮರಗಳ ಸಂರಕ್ಷಣೆ ಅಗತ್ಯ\’ ಎಂದವರು ಹೇಳಿದರು.