ಪ್ರತಿಷ್ಠಿತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಅಮಾಯಕರಿಂದ ಹಣ ವಸೂಲಿ ಮಾಡುವುದನ್ನು ಮುಂದುವರೆಸಿದ ಸೈಬರ್ ಕ್ರೆö ಕಿಡಿಗೇಡಿಗಳು ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಫೋಟೋ ಬಳಸಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ.
ಈ ಹಿಂದೆ ವಿವಿಧ ಪಿಸೈ ಹಾಗೂ ಪೊಲೀಸರ ಹೆಸರಿನಲ್ಲಿ ನಕಲಿ ಖಾತೆ ತೆರೆದ ದುಷ್ಕರ್ಮಿಗಳು ಅನೇಕರನ್ನು ಯಾಮಾರಿಸಿದ್ದರು. ಆದರೆ, ಈವರೆಗೂ ಪೊಲೀಸ್ ವರಿಷ್ಠಾಧಿಕಾರಿ ಫೋಟೋ ಬಳಸುವ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಗುರುವಾರ ಪೊಲೀಸ್ ಇಲಾಖೆಯ ಖಾತೆಯನ್ನು ಖದೀಮರು ನಕಲು ಮಾಡಿದ್ದು, ಆ ಖಾತೆಯ ಮೂಲಕ ಹಲವರಿಗೆ ಸ್ನೇಹದ ಕೋರಿಕೆ ರವಾನಿಸಿದ್ದಾರೆ.
ಈ ಬಗ್ಗೆ ಅರಿತ ಜಿಲ್ಲಾ ಪೊಲೀಸ್ ಘಟಕ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ನಕಲಿ ಖಾತೆಯಿಂದ ಬರುವ ಯಾವುದೇ ಸಂದೇಶವನ್ನು ನಂಬದoತೆ ಸೂಚಿಸಲಾಗಿದೆ. ಜಿಲ್ಲಾ ಪೊಲೀಸ್ ಘಟಕದ ಅಸಲಿ ಖಾತೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಫೋಟೋ ಜೊತೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಫೋಟೋವಿದೆ. ಆದರೆ, ನಕಲಿ ಖಾತೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ನೌಕಾ ಅಧಿಕಾರಿಗಳ ಜೊತೆಯಿದ್ದ ಫೊಟೋವನ್ನು ಕಿಡಿಗೇಡಿಗಳು ಬಳಸಿದ್ದಾರೆ.
`ನಕಲಿ ಖಾತೆಯ ಮೂಲಕ ದುಷ್ಕರ್ಮಿಗಳು ಜನತೆಯಲ್ಲಿ ಹಣ ಕೇಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜನ ಮೋಸ ಹೋಗಬಾರದು. ನಕಲಿ ಖಾತೆ ತೆರೆದ ಬಗ್ಗೆ ಸೈಬರ್ ಕ್ರೆö ಪೊಲಿಸ್ ದೂರು ದಾಖಲಾಗಲಿದೆ\’ ಎಂದು ಪೊಲೀಸರು ಹೇಳಿದ್ದಾರೆ.