ಯಲ್ಲಾಪುರ: ಆಚಾರಿ ಕೆಲಸ ಮಾಡಿಕೊಂಡಿದ್ದ ಅಕ್ಬರಗಲ್ಲಿಯ ಅಬ್ದುಲ್ ಖಾದರ್ ಖಾನ್ (65) ಅಂಚೆ ಇಲಾಖೆ ಬಳಿ ಸರಾಯಿ ಕುಡಿದು ಸಾವನಪ್ಪಿದ್ದಾರೆ.
ವಿಪರೀತ ಸರಾಯಿ ಕುಡಿಯುತ್ತಿದ್ದ ಅಬ್ದುಲ್ ವಾರಗಳ ಕಾಲ ಮನೆಗೆ ಬರುತ್ತಿರಲಿಲ್ಲ. ಎಲ್ಲೆಂದರಲ್ಲಿ ವಸತಿ ಹೂಡಿ ಆಗಾಗ ಮನೆಗೆ ಬರುತ್ತಿದ್ದ ಬಗ್ಗೆ ಮನೆಯವರು ತಲೆಕೆಡಿಸಿಕೊಂಡಿರಲಿಲ್ಲ. ಜುಲೈ 30ರಂದು ಸಹ ಅಬ್ದುಲ್ ಖಾನ್ ಮನೆಯಿಂದ ಹೊರ ಹೋದವ ಮರಳಿ ಬಂದಿರಲಿಲ್ಲ.
ಅಗಸ್ಟ್ 6ರಂದು ಅಂಚೆ ಇಲಾಖೆಯ ಹಳೆ ಕಟ್ಟಡದಲ್ಲಿ ಅಬ್ದುಲ್ ಮಲಗಿರುವ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣ ಅಬ್ದುಲ್ಲರ ಪುತ್ರಿ ಮುತ್ರುಜಾ ಅಲ್ಲಿ ಹೋಗಿ ವಿಚಾರಿಸಿದ್ದಾರೆ. ಆ ವೇಳೆಗಾಗಲೇ ಅಬ್ದುಲ್ಲಾ ನಿತ್ರಾಣಗೊಂಡು ಸಾವನಪ್ಪಿರುವುದು ಗೊತ್ತಾಗಿದೆ. ಈ ಬಗ್ಗೆ ಹೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುವ ಮುತ್ರುಜಾ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಶವ ಬಿಡಿಸಿಕೊಂಡರು.