ಕಾರವಾರ-ಅಂಕೋಲಾ ನೀರು ಸರವರಾಜು ಮಾಡುವ ಹೊನ್ನಳ್ಳಿಯ ಪೈಪ್ಲೈನ್\’ನಲ್ಲಿ ಸೋರಿಕೆ ಕಂಡಿದ್ದು, ಈ ಹಿನ್ನಲೆ ಅಗಸ್ಟ 7ರಂದು ಕಾರವಾರಕ್ಕೆ ಕುಡಿಯುವ ನೀರು ಸರಬರಾಜು ಆಗುವುದಿಲ್ಲ.
ಹೊನ್ನಳ್ಳಿ ಮೂಲಸ್ಥಾವರದಲ್ಲಿ 711 ಮಿ.ಮಿ ವ್ಯಾಸದ ಏರು ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಗೊತ್ತಾಗಿದೆ. ಈ ಕೊಳವೆಯ ದುರಸ್ಥಿ ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಿ ಕಾರವಾರ, ಅಂಕೋಲಾ, ಸೀಬರ್ಡ್, ನೌಕನೆಲೆ, ಬಿಣಗಾ ಮೊದಲಾದ ಕಡೆ ನೀರು ಸರಬರಾಜು ಇರುವುದಿಲ್ಲ.