
ಮುಂಡಗೋಡು: ವೀರಾಪುರದ ಕೃಷ್ಣ ದೇವೇಂದ್ರ ಹಾನಗಲ್ (32) ಎಂಬಾತ ಮಳಗಿಯ ನಾಗೇಂದ್ರಪ್ಪ ಬಸರಪ್ಪ ಸಬರದ್ ಎಂಬಾತರಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಂದ್ರಪ್ಪ ಸಾವನಪ್ಪಿದ್ದಾರೆ.
ಅಗಸ್ಟ್ 5ರ ಸಂಜೆ ಮಳಗಿ ದಾಸನಕೊಪ್ಪ ತಿರುವಿನ ಬಳಿ ಕೃಷ್ಣ ಹಾನಗಲ್ ಅಪಘಾತ ಮಾಡಿದ್ದ. ರಸ್ತೆ ಬದಿ ನಡೆದು ಹೋಗುತ್ತಿದ್ದ ಕೃಷ್ಣ ಅವರಿಗೆ ಹಿಂದಿನಿoದ ಬಂದು ಈತ ಬೈಕ್ ಗುದ್ದಿದ್ದ. ಇದರಿಂದ ನಾಗೇಂದ್ರಪ್ಪ ತಲೆಗೆ ಪೆಟ್ಟಾಗಿದ್ದು, ರಕ್ತದ ಮೊಡವಿನಲ್ಲಿ ಬಿದ್ದಿದ್ದರು. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. ಹುಬ್ಬಳ್ಳಿ ಸುಚಿರಾಯ ಆಸ್ಪತ್ರೆಯಲ್ಲಿ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಅಗಸ್ಟ 6ರಂದು ಅಲ್ಲಿನ ವೈದ್ಯರು ನಾಗೇಂದ್ರಪ್ಪ ಸಾವನಪ್ಪಿದ ಬಗ್ಗೆ ಘೋಷಿಸಿದರು.