ಕಾರವಾರ: ಬಸ್ ನಿಲ್ದಾಣ ಬಳಿಯ ಜ್ಯೋತಿ ಮೆಡಿಕಲ್ಸ ಮುಂದೆ ಇರಿಸಿದ್ದ ಚಂದ್ರಕಾoತ ಅಣ್ವೇಕರ್ ಅವರ ಬೈಕ್ ಕಳ್ಳತನವಾಗಿದೆ.
ಸೋನಾರವಾಡದ ಚಂದ್ರಕಾoತ ಅಣ್ವೇಕರ್ ಬಿಣಗಾದ ಮಾಳಸಾವಾಡದ ಖಾಸಗಿ ಕಂಪನಿಯ ಉದ್ಯೋಗಿ. ಅಗಸ್ಟ 3ರಂದು ಬೆಳಗ್ಗೆ ಅವರು ಜ್ಯೋತಿ ಮೆಡಿಕಲ್ಸ ಎದುರು ತಮ್ಮ ಬೈಕ್ ನಿಲ್ಲಿಸಿ ಹೋಗಿದ್ದರು. ಅದೇ ದಿನ ಸಂಜೆ 5 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ ಜಾಗದಲ್ಲಿ ಬೈಕ್ ಇರಲಿಲ್ಲ. ಅಕ್ಕಪಕ್ಕದವರಿಗೆ ವಿಚಾರಿಸಿದರೂ ಬೈಕ್ ಕಳ್ಳನ ಬಗ್ಗೆ ಗೊತ್ತಾಗಲಿಲ್ಲ. ಹಿರೋ ಹೋಂಡಾ ಸ್ಪೆಂಡರ್ ಬೈಕ್ ಅದಾಗಿದ್ದು, 30 ಸಾವಿರ ರೂ ನಷ್ಟವಾದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ. ತಮ್ಮ ಬೈಕ್ ಹುಡುಕಿಕೊಡಿ ಎಂದು ಅವರು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.