ಹೊನ್ನಾವರ: ಗಾಳಿ ಮಳೆಯಿಂದ ಈ ವರ್ಷ ಅಡಿಕೆ ಬೆಳೆಗೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಸ್ಪಂದಿಸಿ ಯೋಗ್ಯ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.
ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಡಿ.ಎಮ್.ನಾಯ್ಕ ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ರವಾನಿಸಿದ್ದಾರೆ. `ಅತಿಯಾದ ಮಳೆಯಿಂದ ಅಡಿಕೆ ಉದುರಿರುವ ಜೊತೆಗೆ ಕೊಳೆರೋಗ ಬಾಧಿಸಿದೆ. ಹೀಗಾಗಿ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ತಕ್ಷಣ ಕ್ಷೇತ್ರವಾರು ಸಮೀಕ್ಷೆ ನಡೆಸಿ ಉದುರಿದ ಪ್ರತಿ ಅಡಿಕೆಗೆ 3 ರೂಪಾಯಿ ಪರಿಹಾರ ನೀಡಬೇಕು\’ ಎಂದು ಆಗ್ರಹಿಸಿದ್ದಾರೆ.
ಇದರೊಂದಿಗೆ `ಮಂಗನ ಕಾಟದಿಂದ ತೆಂಗಿನಕಾಯಿ ಹಾಳಾಗಿದ್ದು, ಪ್ರತಿ 100 ತೆಂಗಿನ ಕಾಯಿಗೆ 3 ಸಾವಿರ ರೂ ಪರಿಹಾರ ನೀಡಬೇಕು. ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಬೇಕು\’ ಎಂದು ಆಗ್ರಹಿಸಿದ್ದಾರೆ.