ದಾಂಡೇಲಿ: `ಎಂದಿನoತೆ ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದೆ. ಏಕಾಏಕಿ ಅಲ್ಲಿಗೆ ಕರಡಿ ಮೈ-ಕೈ ಎಲ್ಲಾ ಪರಚಿತು. ಅಂತೂ ಊರ ಕಡೆ ಓಡಿ ಬಂದು ಬದುಕಿದೆ\’ ಎಂದು ವನ್ಯಜೀವಿ ದಾಳಿಗೆ ಒಳಗಾದ ಬಾಳು ಕಾನು ಶೆಳಕೆ ಅನುಭವ ಹಂಚಿಕೊoಡರು.
`ಎಮ್ಮೆಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಅವರ ಮೇಲೆ ಭಾನುವಾರ ಕರಡಿ ದಾಳಿ ನಡೆಸಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತನಾಡಲು ಕಷ್ಟವಾದರೂ ಅವರ ಆರೋಗ್ಯ ವಿಚಾರಿಸಲು ಬಂದವರಿಗೆ ಕರಡಿಯ ಭಯಾನಕ ಕಥೆ ಹೇಳಿದ್ದಾರೆ.
`ಮನೆ ಪಕ್ಕದ ಕಾಡಿನಲ್ಲಿ ವನ್ಯಜೀವಿಗಳು ಇರುವುದು ಗೊತ್ತಿತ್ತು. ಆದರೆ, ಈ ಬಗೆ ಆಕ್ರಮಣಕಾರಿ ಕರಡಿ ಇದೆ ಎಂದು ಅಂದುಕೊoಡಿರಲಿಲ್ಲ. ಕೈ ಮುಖ ಬೆನ್ನು ಎಲ್ಲಾ ಕಡೆ ಪರಚಿತ್ತು. ಎಮ್ಮೆ ಮೇಯಿಸಲು ಹೋಗುವಾಗಲೂ ಎಚ್ಚರಿಕೆ ಅಗತ್ಯ\’ ಎಂದು ಅವರು ತನ್ನ ಸಂಬoಧಿಕರಿಗೆಲ್ಲ ಕಿವಿಮಾತು ಹೇಳಿದರು.
ಗಂಭೀರ ಗಾಯಗೊಂಡ ಕಾರಣ ಅವರಿಗೆ ಧಾರವಾಡದಲ್ಲಿ ಚಿಕಿತ್ಸೆ ಮುಂದುವರೆದಿದೆ.