ಶಿರಸಿ: ಭಟ್ಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಜಾನುವಾರುಗಳನ್ನು ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ರಕ್ಷಿಸಿದ್ದಾರೆ.
ಅಗಸ್ಟ 7ರ ಬೆಳಗ್ಗೆ 1.30ರ ಅವಧಿಯಲ್ಲಿ ಅಕ್ರಮ ಜಾನುವಾರು ಸಾಗಾಟಗಾರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾವೇರಿಯ ಶ್ರೇಯಸ್ ನಿಂಗಪ್ಪ ತಡಸ್ ಹಾಗೂ ಸುಲೇಮಾನ್ ಮಹಮದ್ ಹನೀಪ ಎಂಬಾತರು ಹಾನಗಲ್\’ನ ಕೆರೆಮತ್ತಿಹಳ್ಳಿಯಿಂದ ಎತ್ತು, ಎಮ್ಮೆ ಹಾಗೂ ಕೋಣವನ್ನು ಟಾಟಾ ಇಂಟ್ರಾ ವಾಹನದಲ್ಲಿ ಸಾಗಿಸುತ್ತಿದ್ದರು. ವಾಹನದ ಒಳಗಿದ್ದ ಮೂಕಪ್ರಾಣಿಗಳಿಗೆ ಮಲಗಲು ಸಹ ಸ್ಥಳಾವಕಾಶ ಇರಲಿಲ್ಲ. ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಅನುಮತಿ ಪತ್ರವನ್ನು ಸಹ ಆರೋಪಿತರು ಹೊಂದಿರಲಿಲ್ಲ.
ರಾತ್ರಿ ಪಹರೆ ಕಾಯುತ್ತಿದ್ದ ಪಿಸೈ ನಾಗಪ್ಪ ಅಗಸೆಬಾಗಿಲ ಚರ್ಚಿನ ಬಳಿ ಅವರ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ವಾಹನ ಪರಿಶೀಲಿಸಿದಾಗ ಅದರೊಳಗೆ ಅಕ್ರಮ ಸಾಗಾಟದ ಜಾನುವಾರುಗಳಿದ್ದು, ಕೂಡಲೇ ಅವುಗಳಿಗೆ ಉಸಿರಾಡಲು ಅವಕಾಶ ಮಾಡಿಕೊಟ್ಟು ಜೀವ ಉಳಿಸಿದರು. ಅಕ್ರಮ ಜಾನುವಾರು ಸಾಗಾಟಗಾರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡರು.