`ಸೃಷ್ಟಿಯಲ್ಲಿ ಶಾಶ್ವತ ಯಾವುದೂ ಅಲ್ಲ. ಸೃಷ್ಟಿ ಅದಕ್ಕೆ ಅವಕಾಶ ನೀಡುವುದಿಲ್ಲ. ಸ್ವತಃ ದೇವರೇ ಅವತಾರವೆತ್ತಿ ಬಂದರೂ ಅಂತ್ಯ ಇರುತ್ತದೆ. ಅಂತೆಯೇ ಯಾವುದೂ ಮೂಲಸ್ವರೂಪದಲ್ಲಿ ಉಳಿಯುವುದಿಲ್ಲ\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣದ ಅಶೋಕೆಯಲ್ಲಿ ಬುಧವಾರ ಜೀವಯಾನ ಮಾಲಿಕೆಯಲ್ಲಿ `ಯಮನನ್ನು ಗೆದ್ದವರುಂಟೇ\’ ಎಂಬ ವಿಷಯದ ಬಗ್ಗೆ ಅವರು ಪ್ರವಚನ ನೀಡಿದರು.
`ಯಮಯಾತನೆಯಿಂದ ಮುಕ್ತಿ ಪಡೆಯಲು ದಾನವೊಂದೇ ಮಾರ್ಗ. ಜೀವನದಲ್ಲಿ ದಾನ ಮಾಡಿದವನು ಯಮನ ಕೃಪೆಗೂ ಪಾತ್ರನಾಗುತ್ತಾನೆ. ಜೀವಯಾನ ಎನ್ನುವುದು ಕಾಲಕ್ಕೆ ಅನುಗುಣವಾಗಿ ನಡೆಯುತ್ತಾರೆ. ಪುಣ್ಯಾತ್ಮರು ಕಾಲವನ್ನು ದಾಟಿ ಮುನ್ನಡೆಯುತ್ತಾರೆ. ಜೀವಗಳ ದುರವಸ್ಥೆ ಬಗ್ಗೆ ಒಂದನೇ ಮಾಲಿಕೆಯಲ್ಲಿ ಪ್ರವಚನ ನೀಡಲಾಗಿತ್ತು. ಪ್ರತಿಯೊಬ್ಬರೂ ಯಮನ ಕೈವಶ. ಆದರೆ ಯಮನೊಂದಿಗೆ ಹೋರಾಡಿ ಗೆದ್ದ ಮಹಾತ್ಮರ ಕಥಾ ಸರಣಿ ಈ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಲಾಗುತ್ತಿದೆ\’ ಎಂದರು.
`ಎಲ್ಲರೂ ಕಾಲವಶವೇ ಸರಿ. ಶ್ರೀರಾಮ, ಪಾಂಡವರು, ಶ್ರೀಕೃಷ್ಣ, ಬಲಿ ಚಕ್ರವರ್ತಿ, ನಳ, ರಾವಣನಂಥವರು ಕೂಡಾ ಕಾಲನ ಕಾರಣದಿಂದ ಸಂಕಷ್ಟ ಎದುರಿಸಬೇಕಾಯಿತು. ಯಮನಿಗೆ ತುತ್ತಾಗದವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ\’ ಎಂದು ವಿವರಿಸಿದರು.