ಕಾಳಿ ಸೇತುವೆ ಕುಸಿದಾಗ ಮೀನುಗಾರರು ಧೈರ್ಯ ಕಳೆದುಕೊಂಡಿದ್ದರೆ ಲಾರಿ ಚಾಲಕ ಬಾಲಮುರುಗನ್ ಬದುಕುತ್ತಿರಲಿಲ್ಲ!
ಬುಧವಾರ ಬೆಳಿಗ್ಗೆ 12.30ರ ಆಸುಪಾಸಿನಲ್ಲಿ ಸೇತುವೆ ಕುಸಿದು ಬಿದ್ದಿದ್ದು, ಬಾಲಮುರುಗನ್ ಲಾರಿ ಜೊತೆ ನದಿಗೆ ಬಿದ್ದಿದ್ದ. ಇದೇ ವೇಳೆ ದೇವಭಾಗ್ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರು ತಮ್ಮ ದೋಣಿ ಜೊತೆ ಆಗಮಿಸಿ ಆತನನ್ನು ಮೇಲೆತ್ತಿದ್ದಾರೆ.
ಕಾಳಿ ನದಿಯಲ್ಲಿ ಲಾರಿ ಮುಳುಗಿದ್ದ ಚಾಲಕ ಬಾಲ ಮುರುಗನ್ ಲಾರಿ ತುದಿಯಲ್ಲಿ ಕುಳಿತಿದ್ದನ್ನು ಮೊದಲು ನೋಡಿದವರು ಮೀನುಗಾರರು. ತಕ್ಷಣ ಆತನಿಗೆ ತಮ್ಮ ಬಳಿಯಿದ್ದ ಲೈಫ್ ಜಾಕೇಟ್ ನೀಡಿದ್ದು, ನಂತರ ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.