
ಯಲ್ಲಾಪುರ: ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಹೋಗುತ್ತಿದ್ದ ಲಾರಿ ಕಿರವತ್ತಿ ತಪಾಸಣಾ ಕೇಂದ್ರದ ಬಳಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿದೆ.
ಅಗಸ್ಟ 6ರ ರಾತ್ರಿ ಕುಂದಾಪುರದ ಪ್ರಭಾಕರ ಶೆಟ್ಟಿ ಎಂಬಾತರು ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ ಬರುತ್ತಿದ್ದ ಲಾರಿ ಓಡಿಸುತ್ತಿದ್ದರು. ಆಗ ಎದುರಿನಿಂದ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಗದಗದ ಮಲ್ಲಿಕಾಸಾಬ್ ಎಂಬಾತ ಶೆಟ್ಟರ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಲಾರಿಯ ಒಳಗಿದ್ದವರಿಗೆ ಅಲ್ಲಲ್ಲಿ ಗಾಯವಾಗಿದ್ದು, ಎರಡೂ ಲಾರಿಯ ಮುಂಬಾಗ ಜಖಂ ಆಗಿದೆ. ತಮ್ಮ ಲಾರಿಯ ನಷ್ಟ ಭರಿಸಿಕೊಡಬೇಕು ಎಂದು ಆಗ್ರಹಿಸಿ ಪ್ರಭಾಕರ ಶೆಟ್ಟಿ ಪೊಲೀಸ್ ದೂರು ನೀಡಿದ್ದಾರೆ.