ಕುಮಟಾ: ಪಟ್ಟಣದಲ್ಲಿ ಬೀದಿ ನಾಯಿಗಳ ಜಾತ್ರೆ ನಡೆಯುತ್ತಿದ್ದು, ಶಾಲೆಗೆ ಹೋಗುವ ಮಕ್ಕಳು ಇದರಿಂದ ಬೆದರಿದ್ದಾರೆ. ಆಕ್ರಮಣಕಾರಿ ನಾಯಿಗಳ ಕಾಟದಿಂದ ಮುಕ್ತಿ ಕೊಡಿ ಎಂದು ಅನೇಕರು ಪುರಸಭೆ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದ್ವಿಚಕ್ರ ವಾಹನಗಳ ಅಪಘಾತಕ್ಕೆ ಅವರು ಕಾರಣವಾಗುತ್ತಿದೆ. ಈಗಾಗಲೇ ಅನೇಕರು ನಾಯಿ ಕಾಟಕ್ಕೆ ಬೈಕಿನಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಯಾವ ಭಾಗಕ್ಕೆ ಹೋದರೂ ಅಲ್ಲಿ ಗುಂಪಿನಲ್ಲಿರುವ ಬೀದಿ ನಾಯಿಗಳು ಕಾಣಬರುತ್ತಿದೆ.
ಚಿಕ್ಕ ಮಕ್ಕಳನ್ನು ಸಹ ಅವರು ಬೆದರಿಸುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಜಾನುವಾರುಗಳ ವಿರುದ್ಧ `ಕಠಿಣ ಕ್ರಮ\’ ಜರುಗಿಸುವ ಪುರಸಭೆ ಈವರೆಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಒಂದೆರಡು ಬಾರಿ ಮಾತ್ರ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದ್ದು, ನಂತರ ಅದನ್ನು ಮುಂದುವರೆಸಿಲ್ಲ. ಇದೀಗ ಎಲ್ಲಾ ಭಾಗದಲ್ಲಿಯೂ ನಾಯಿಗಳ ಜಾತ್ರೆ ಜೋರಾಗಿದೆ.