`ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಗುತ್ತಿಗೆ ಎಜನ್ಸಿಯವರು ಸಮಯಕ್ಕೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಇಲಾಖೆ ಸೂಚಿಸಿದ ವೇತನದ ಜೊತೆ ಕನಿಷ್ಟ ಮೂಲಭೂತ ಸೌಕರ್ಯವನ್ನು ಸಹ ಕೊಡುತ್ತಿಲ್ಲ\’ ಎಂದು ಆರೋಪಿಸಿ ಕರುನಾಡ ರಕ್ಷಣಾ ವೇದಿಕೆ ಸರ್ಕಾರಕ್ಕೆ ಪತ್ರ ಬರೆದಿದೆ.
ಉತ್ತರ ಕನ್ನಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅನೇಕರು ಹೊರಗುತ್ತಿಗೆ ಆಧಾರವಾಗಿ ದುಡಿಯುತ್ತಿದ್ದಾರೆ. ಆಯಾ ಇಲಾಖೆಯಿಂದ ಹಣ ಪಡೆಯುವ ಗುತ್ತಿಗೆ ಎಜನ್ಸಿಯವರು ಅದನ್ನು ಕಾರ್ಮಿಕರಿಗೆ ಪಾವತಿಸುತ್ತಿಲ್ಲ. ಸರ್ಕಾರೇತರ ಸಂಸ್ಥೆಗಳಲ್ಲಿ ಸಹ ಈ ಅನ್ಯಾಯ ನಡೆಯುತ್ತಿದೆ ಎಂದು ವೇದಿಕೆ ಅಧ್ಯಕ್ಷ ಎನ್ ದತ್ತಾ ಆಕ್ರೋಶ ವ್ಯಕ್ತಪಡಿಸಿದರು.
`ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರು, ಭದ್ರತಾ ಸಿಬ್ಬಂದಿ, ಲ್ಯಾಬ್ ಟೆಕ್ನಿಶಿಯನ್, ಕಂಪ್ಯುಟರ್ ಆಪರೇಟರ್ ಮೊದಲಾದವರು ಸಂಬಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಿದ ವೇತನ ಅವರಿಗೆ ಸಿಗುತ್ತಿಲ್ಲ\’ ಎಂದು ದೀಪಕ ಕುಡಾಳಕರ್ ದೂರಿದರು.
`ತಮಗಾದ ಅನ್ಯಾಯದ ಬಗ್ಗೆ ಅನೇಕರು ಧ್ವನಿ ಎತ್ತಿಲ್ಲ. ದೊಡ್ಡದಾಗಿ ಮಾತನಾಡಿದರೂ ಕೆಲಸದಿಂದ ತೆಗೆಯುವ ಭಯ ಅವರನ್ನು ಕಾಡುತ್ತಿದೆ\’ ಎಂದು ಮದನ ಗುನಗಿ, ಗುರುದಾಸ ಎಮ್ ನಾಯ್ಕ ವಿವರಿಸಿದರು. ಈ ಎಲ್ಲಾ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಲಕ್ಷಿö್ಮÃಪ್ರಿಯಾ ಅವರ ಮೂಲಕ ಸುಜೀತ ಮಲ್ಸೇಕರ, ಮಹೇಶ್ ನಾಯ್ಕ್, ದೀಪಕ್ ಲಾಂಜೆಕರ, ಮಂಗೇಶ ನಾಯ್ಕ ಇತರರು ಸರ್ಕಾರಕ್ಕೆ ಪತ್ರ ರವಾನಿಸಿದರು.