ಯಲ್ಲಾಪುರ: ಬೈಲಂದೂರು ಮಸೀದಿಗಲ್ಲಿಯ ಲಕ್ಷ್ಮೀ ದೇಸಾಯಿ ಅವರ ಮನೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಲಕ್ಷ್ಮೀ ಹಾರವನ್ನು ಕದ್ದು ಪರಾರಿಯಾಗಿದ್ದಾರೆ.
ಜುಲೈ 22ರಂದೇ ಈ ಕಳ್ಳತನ ನಡೆದಿದೆ. ಇಷ್ಟು ದಿನಗಳ ಕಾಲ ಚಿನ್ನಾಭರಣ ಹುಡುಕಾಟ ನಡೆಸಿದ ಅವರು ಸಿಗದ ಕಾರಣ ಇದೀಗ ಪೊಲೀಸ್ ದೂರು ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಜುಮುಕಿ, ಕಿವಿಯ ಸರಪಳಿಗಳು ಸಹ ಕಳ್ಳರ ಪಾಲಾಗಿದೆ. ಇದರಿಂದ ಅವರಿಗೆ 1.43 ಲಕ್ಷ ರೂ ಹಾನಿಯಾಗಿದೆ.