ಕಾರವಾರ: ಸದಾಶಿವಗಡದ ರಾಮನಾಥ ಕ್ರಾಸಿನಿಂದ ಗಾಂವಕೇರಿ ಕ್ರಾಸ್ ಕಡೆ ಸ್ಕೂಟಿ ಓಡಿಸಿಕೊಂಡು ಹೋಗುತ್ತಿದ್ದ ವಿನಯ ಅಶೋಕ ಕುರುಡೇಕರ್ ಎಂಬಾತರಿಗೆ ಗೋವಾ ಕಡೆಯಿಂದ ಬಂದ ಕಾರು ಗುದ್ದಿದ್ದು, ವಿನಯ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಅಗಸ್ಟ 8ರ ಬೆಳಗ್ಗೆ 11 ಗಂಟೆ ವೇಳೆಗೆ ವಿನಯ ಕುರುಡೇಕರ್ ತಮ್ಮ ಸ್ಕೂಟಿ ಏರಿ ಹೊರಟಿದ್ದರು. ಆಗ ಗೋವಾ ಕಡೆಯಿಂದ ವೇಗವಾಗಿ ಕಾರು ಓಡಿಸಿಕೊಂಡು ಬಂದ ಪೋಂಡಾದ ರೂಪೇಶ ರಾಜಾರಾಮ ನಾಯ್ಕ ಅವರ ಸ್ಕೂಟಿಗೆ ಗುದ್ದಿದ್ದಾರೆ. ಪರಿಣಾಮ ಸ್ಕೂಟಿಯ ಜೊತೆ ವಿನಯ ಸಹ 40 ಅಡಿ ದೂರದವರೆಗೆ ರಸ್ತೆಯಲ್ಲಿ ಉರುಳಿಕೊಂಡು ಹೋಗಿದ್ದು, ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಹೊರಳಾಡಿ ಸಾವನಪ್ಪಿದ್ದಾರೆ.
ಕಾರು ಚಾಲಕ ತನ್ನ ಮುಂದಿದ್ದ ಲಾರಿಯನ್ನು ಓವರ್ಟೆಕ್ ಮಾಡುವ ಬರದಲ್ಲಿ ಅಮಾಯಕನ ಜೀವ ತೆಗೆದಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.
ಅಪಘಾತದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..