ಶಿರಸಿ: ಮುಂಡಗೋಡಿನ ನಂದಿಗಟ್ಟಾದ ಮಾರುತಿ ರಾದಾಪುರ ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಅವರು ಶಿರಸಿಯ ಸಾಲ್ಕಣಿ ಗ್ರಾ ಪಂ ಕಾರ್ಯದರ್ಶಿಯಾಗಿದ್ದರು. ಗುರುವಾರ ಬೆಳಗ್ಗೆ ಕಚೇರಿಗೆ ಹೋಗುವಾಗ ಈ ಅಪಘಾತ ನಡೆದಿದೆ. ಅವರು ಓಡಿಸುತ್ತಿದ್ದ ಸ್ಕೂಟಿಗೆ ಕೋಳಿಗಾರ ಬಳಿ ಕಾರು ಡಿಕ್ಕಿಯಾಗಿದ್ದು, ಇದರಿಂದ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.