ಶಿರಸಿ: ಸ್ವಾದಿ ಜೈನ ಮಠದಲ್ಲಿ ಶ್ರಾವಣ ಮಾಸದ ಹಿನ್ನಲೆಯಲ್ಲಿ ಕೂಷ್ಮಾಂಡಿನಿ ದೇವಿಗೆ 108 ಬಗೆಯ ವಿಶೇಷ ನೈವೇದ್ಯ ಅರ್ಪಿಸಲಾಯಿತು.
ಸ್ವಾದಿ ದಿಗಂಬರ ಜೈನ ಮಠಾಧೀಶ ಶ್ರೀ ಬಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಅಮ್ಮನವರಿಗೆ ವಿಶೇಷ ಅಭಿಷೇಕ ಪೂಜಾ ಆರಾಧಾನೆ, ಅಷ್ಟಾವಧಾನ ಮೊದಲಾದ ಪೂಜೆಗಳು ನಡೆದವು. ಭಕ್ತರು ಅಮ್ಮನವರಿಗೆ ಹೋಳಿಗೆ, ಲಾಡು, ಖರ್ಜಿಕಾಯಿ, ಚಕ್ಕುಲಿ, ಭರ್ಪಿ, ಜಾಮೂನು, ಪಾಯಸ ಮೊದಲಾದ 108 ನೈವೇದ್ಯ ಅರ್ಪಿಸಿದರು.
ಈ ವೇಳೆ ಸೇವಾಕರ್ತರಾದ ಬಿ.ಟಿ.ಕಸ್ತೂರಿ, ಸಾವಿತ್ರಿ ಗೋಕಾಕ ಹಾಗೂ ಸೋಂದಾ ಧರ್ಮದೇವಿ ಮಹಿಳಾ ಸಮಾಜದ ಪ್ರಮುಖರಿದ್ದರು.