ಹೊನ್ನಾವರ: ಜಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೆಲ ರೈತರು ಸಾಲ ಪಡೆಯುವ ವೇಳೆ ಜಾಮೀನುದಾರರಾಗಿ ಸಹಿ ಮಾಡಿದವರಿಗೂ ಬೆಳೆ ಸಾಲ ಸಿಗದೇ ಸಂಕಷ್ಟ ಎದುರಾಗಿದೆ.
ಬೆಳೆಸಾಲ ಕೊಡದ ಕಾರಣ ಆಕ್ರೋಶಗೊಂಡ ರೈತರು ಸೊಸೈಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. `ಸಾಲ ನೀಡುವ ಪೂರ್ವದಲ್ಲಿ ಸೊಸೈಟಿಯಿಂದ ಜಾಮೀನುದಾರರಿಗೆ ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ\’ ಎಂಬುದು ರೈತರ ದೂರು. `ಕಳೆದ ಎರಡು ವರ್ಷದಿಂದ ಸೊಸೈಟಿ ಸಭೆ ನಡೆಸಿಲ್ಲ. ಯಾವ ರೈತರಿಗೂ ಮಾಧ್ಯಮಿಕ ಸಾಲ ಸಿಕ್ಕಿಲ್ಲ\’ ಎಂದು ಆಕ್ರೋಶ ಹೊರಹಾಕಿದರು.
`ಸಾಲ ಕೊಡಿ ಎಂದರೆ ಸಾಲಗಾರರ ಬಾಕಿ ಪಾವತಿಸಿ ಎನ್ನುತ್ತಾರೆ. ಗಾಳಿ-ಮಳೆಯಿಂದ ತೋಟಕ್ಕೆ ಹಾನಿಯಾಗಿದ್ದು, ತುರ್ತಾಗಿ ಸಾಲ ಸಿಗದಿದ್ದರೆ ಆತ್ಮಹತ್ಯೆಯೇ ಪರಿಹಾರ\’ ಎಂದು ಕೇಶವ ನಾಯ್ಕ ಅಳಲು ತೋಡಿಕೊಂಡರು. `ಕೋಟಿ ಲೆಕ್ಕಾಚಾರದಲ್ಲಿ ಸಾಲ ಬಾಕಿ ಇರುವುದರಿಂದ ಸಮಸ್ಯೆಯಾಗಿದೆ. ನಮಗೂ ಪ್ರಶ್ನಿಸುವವರಿದ್ದಾರೆ\’ ಎಂದು ಸೊಸೈಟಿ ಅಧ್ಯಕ್ಷ ಜಯಂತ ನಾಯ್ಕ ಹೇಳಿದರು.