ಹಳಿಯಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಂಗೇಶ ಕೃಷ್ಣ ಪಾಟೀಲ ಅವರ ಮನೆಗೆ ತೆರಳಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರ ಹೋರಾಟಗಳ ಬಗ್ಗೆ ಮಾಹಿತಿ ಪಡೆದು, ಶ್ಲಾಘಿಸಿದರು.
96 ವರ್ಷದ ಮಂಗೇಶ ಕೃಷ್ಣ ಪಾಟೀಲ ಅವರು ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದರು. ಈ ವೇಳೆ ಶಾಲು ಹೊದೆಸಿ ಹಿರಿಯರನ್ನು ಗೌರವಿಸಿದರು.
ಮಂಗೇಶ ಕೃಷ್ಣ ಪಾಟೀಲ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಆ ವೇಳೆ ಕಾರವಾರದ ಜೈಲಿನಲ್ಲಿ ಕಾಲ ಕಳೆದದನ್ನು ಪಾಟೀಲರು ನೆನೆಸಿಕೊಂಡರು.