
ಹಳಿಯಾಳ: ಗುತ್ತಿಗೇರಿ ಗಲ್ಲಿಯಲ್ಲಿ ಸೈಕಲ್ ರಿಪೇರಿ ಮಾಡುವ ಮಹ್ಮದ್ ಅಬ್ದುಲ್ ರಜಾಕ್, ನಾಸೀರ್ ಅಹ್ಮದ್, ಅದೇ ಭಾಗದಲ್ಲಿ ಆಟೋ ಚಾಲಕ ಮಹಮದ್ ಗೌಸ್, ಆಶ್ರಯನಗರದ ಕೂಲಿ ಕೆಲಸ ಮಾಡುವ ಜಾವೀದ್ ಹಾಗೂ ಅದೇ ಊರಿನ ಕಲಾಮ್ ಹೆಬ್ಬಳ್ಳಿ ಎಂಬಾತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕಾರಣ ಅವರೆಲ್ಲ ಸೇರಿ ಇಸ್ಪಿಟ್ ಆಡುತ್ತಿದ್ದರು!
ಅಗಸ್ಟ್ 8ರ ರಾತ್ರಿ 9.50ಕ್ಕೆ ಚರ್ಚ ರಸ್ತೆಯಿರುವ ಸ್ಮಶಾನದ ಬಳಿ ಈ ಆರೋಪಿತರೆಲ್ಲ ಸೇರಿ ಅಂದರ್-ಬಾಹರ್ ಆಡುತ್ತಿದ್ದರು. ಪಿಸೈ ಅಮಿನಸಾಬ್ ಅತ್ತಾರ್ ಅಲ್ಲಿ ದಾಳಿ ನಡೆಸಿದ್ದು, ಅಕ್ರಮ ಕೂಟಕ್ಕೆ ಬಳಸಿದ 6170ರೂ ಹಣ ಸಿಕ್ಕಿದೆ. ಜೊತೆಗೆ ಇಸ್ಪಿಟ್ ಎಲೆ, ಪ್ಲಾಸ್ಟಿಕ್ ಹಾಳೆಯನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಅದೇ ದಿನ ರಾತ್ರಿ 11.45ಕ್ಕೆ ಎಲ್ಲಾ ಆರೋಪಿಗಳನ್ನು ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸಿದರು.