ಅಂಕೋಲಾ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾದಾರ ಚೆನ್ನಯ್ಯ ಸ್ವಾಮೀಜಿ, ಮೋಹನ ಆಳ್ವ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಅಜಿತ ಹನುಮಕ್ಕನವರ ಸೇರಿದಂತೆ ಹಲವು ಗಣ್ಯರು ಉಳಿಮೆ ಮಾಡಿದ ಭೂಮಿಯಲ್ಲಿ ಭಾನುವಾರ ಕೃಷಿ ಉತ್ಪನ್ನಗಳ ರಪ್ತುದಾರ ಡಾ ಎಚ್ ಎಸ್ ಶೆಟ್ಟಿ ಹಾಗೂ ಬಿಗ್ಬಾಸ್ ಖ್ಯಾತಿಯ ಸಾಧಕ ಕೃಷಿಕ ವರ್ತೂರ ಸಂತೋಷ ಉಳುಮೆ ಮಾಡಿದರು.
ಇದಕ್ಕೆ ಕಾರಣವಾಗಿದ್ದು ಪಹರೆ ವೇದಿಕೆಯ ನಾಗರಾಜ ನಾಯಕ. ಕಳೆದ 12 ವರ್ಷಗಳಿಂದ ಬಾಸಗೋಡದಲ್ಲಿ ನಾಗರಾಜ ನಾಯಕ ಅವರು `ಕೃಷಿ ಹಬ್ಬ\’ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಡಾ ಎಚ್ ಎಸ್ ಶೆಟ್ಟಿ ಆಗಮಿಸಿ ಈ ಹಬ್ಬದಲ್ಲಿ ಉತ್ಸಾಹದಿಂದ ಭಾಗಿಯಾದರು. ತಲೆಗೆ ಬಟ್ಟೆ ಕಟ್ಟಿಕೊಂಡು ಗದ್ದೆಗೆ ಇಳಿದ ಅವರು ಅಲ್ಲಿ ಭತ್ತದ ನಾಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು `ರಾಷ್ಟ್ರದ ಆರ್ಥಿಕತೆಗೆ ಪೂರಕವಾದ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೇ ಬೆಳೆಸಬೇಕಾದ ಅಗತ್ಯ ಇಂದಿನ ಅನಿವಾರ್ಯತೆಗಳಲ್ಲಿ ಒಂದು\’ ಎಂದು ಹೇಳಿದರು.
`ಪರಂಪರಾಗತವಾಗಿದ್ದ ಭಾರತೀಯ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಾಗಿವೆ. ದೇಶಿಯ ಹಸುಗಳ ಬದಲಿಗೆ ಆಕರ್ಷಿಸುವವ ವಿದೇಶಿ ತಳಿ ಹಸುಗಳನ್ನು ಪರಿಚಯಿಸಲಾಗುತ್ತಿದೆ. ಸಂಕರಣ ತಳಿಗಳ ಹಸುವಿನ ಹಾಲಿನಲ್ಲಿ ಸತ್ವವಿಲ್ಲ ಸಗಣಿಯಿಂದ ಸಿದ್ಧಗೊಳ್ಳುವ ಗೊಬ್ಬರದಲ್ಲೂ ಸಾರವಿಲ್ಲದಂತಾಗಿದೆ. ಇನ್ನೊಂದೆಡೆ ಕೀಟನಾಶಕಗಳ ಪ್ರಯೋಗ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಕೃಷಿ ಭೂಮಿ ಬಲ ಕಳೆದುಕೊಳ್ಳುವಂತಾಗಿದೆ\’ ಎಂದು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಕೃಷಿ ಉಳಿಸಲು ಅಂಕೋಲಾ ಬೆಳೆಗಾರರ ಸಮಿತಿ ಆಯೋಜಿಸಿದ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಈ ವೇಳೆ ವರ್ತೂರು ಪ್ರಕಾಶ ಅವರಿಗೆ `ಕೃಷಿಭೀಮಾ ಪ್ರಶಸ್ತಿ\’ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಗಣ್ಯರಿಗೆ ಗಿಡಗಳನ್ನು ಉಡುಗರೆಯಾಗಿ ನೀಡಿದ್ದು ಸಹ ವಿಶೇಷವಾಗಿತ್ತು.