
ಕುಮಟಾ: ದುಂಡುಕುಳಿ ಬೊಂಬಲಿoಗೇಶ್ವರ ದೇವಸ್ಥಾನದ ಎದುರು ಬೀಡಾ ಅಂಗಡಿ ನಡೆಸುತ್ತಿರುವ ಅನಂತ ತಿಮ್ಮಣ್ಣ ಗೌಡ (52) ಮಟ್ಕಾ (Matka) ಆಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಅಗಸ್ಟ 10ರಂದು ಅನಂತ ಗೌಡ ಗೂಡಂಗಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಿಂತು 1 ರೂಪಾಯಿಗೆ 80 ರೂ ನೀಡುವುದಾಗಿ ಹೇಳಿ ಆತ ಜನರಿಂದ 340ರೂ ಹಣ ಸಂಗ್ರಹಿಸಿದ್ದ. ಈ ಬಗ್ಗೆ ತಿಳಿದ ಪಿಸೈ ರವಿ ಗುಡ್ಡಿ ಆತನ ಮೇಲೆ ದಾಳಿ ನಡೆಸಿದರು. ಆಗ ಆತ ಮಟ್ಕಾ (Matka) ಆಡಿಸುತ್ತಿರುವುದು ಖಚಿತಗೊಂಡಿದ್ದು, ಈ ಕೃತ್ಯಕ್ಕೆ ಬಳಸಿದ ಹಣದ ಜೊತೆ ಮಟ್ಕಾ ಚೀಟಿ ಹಾಗೂ ಬಾಲ್ಪೆನ್\’ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.