ಕುಮಟಾ (Gokarna): ಓಂ ಬೀಚ್\’ಗೆ (Om beach) ತೆರಳುವ ದಾರಿಯಲ್ಲಿ ಮಾದಕ ವ್ಯಸನ ಸೇವಿಸುತ್ತಿದ್ದ ಅರ್ಗದೀಪ (24) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಗಸ್ಟ 10ರಂದು ವೆಸ್ಟ ಬಂಗಾಲದ ಅರ್ಗದೀಪ್ ಮುಡಂಗಿ ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಮಾದಕ ವ್ಯಸನ ಸೇವಿಸಿದ್ದ. ನಶೆಯ ಗುಂಗಿನಲ್ಲಿ ಈತ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನನ್ನು ವಶಕ್ಕೆ ಪಡೆದ ಪಿಸೈ ಖಾದರ್ ಭಾಷಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.
ತಪಾಸಣೆ ನಡೆಸಿದ ವೈದ್ಯರು ಆತ ಮಾದಕ ವ್ಯಸನ ಸೇವಿಸಿರುವ ಬಗ್ಗೆ ದೃಢಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.