ಶಿರಸಿ: ಕೆಂಚಗದ್ದೆಯ ಚೌಡಿಗುಂಡಿ ಸೇತುವೆ ಪಿಚ್ಚಿಂಗ್ ಒಂದು ಭಾಗ ಕುಸಿತ ಕಂಡಿದ್ದು (Bridge collapse) ಸಂಪರ್ಕ ಕಡಿತಗೊಳ್ಳುವ ಆತಂಕ ವ್ಯಕ್ತವಾಗಿದೆ.
ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಚೌಡಿಗುಂಡಿ ಹಳೆಯ ಹಳೆಯದಾದ ಸೇತುವೆ ಶಿಥಿಲಾವ್ಯವಸ್ಥೆ ತಲುಪಿದೆ. ಸೇತುವೆ ಕೆಳಭಾಗದಲ್ಲಿ ಹಾಕಿರುವ ಕಬ್ಬಿಣದ ಸರಳು ಕಾಣಿಸುತ್ತಿದೆ. ಒಂದು ಕಡೆ ಈಗಾಗಲೇ ಪಿಚ್ಚಿಂಗ್ ಕುಸಿದಿದೆ.
ಕುಳವೆ-ಕೆಂಚಗದ್ದೆಯ ಮುಖ್ಯ ರಸ್ತೆಯ ಸೇತುವೆ ಕುಸಿದು (Bridge collapse) ಬಿದ್ದರೆ ನೂರಾರು ಮನೆಗಳ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳು 15 ಕಿ.ಮೀ ಸುತ್ತುವರೆದು ಶಾಲೆಗೆ ಬರಬೇಕು. ಈ ಕಾರಣದಿಂದ ತುರ್ತು ದುರಸ್ತಿ ಮಾಡಬೇಕು ಎಂದು ಆ ಭಾಗದವರು ಆಗ್ರಹಿಸಿದ್ದಾರೆ.
ಮಳೆಯ ಆರ್ಭಟಕ್ಕೆ ಸೇತುವೆಯ ಒಂದು ಬದಿಯ ತಡೆಗೋಡೆ ಕುಸಿದು ಬಿದ್ದಿದ್ದು, ಇದರಿಂದ ಸಂಪೂರ್ಣ ರಸ್ತೆ ಕುಸಿದು ಬೀಳುವ ಆತಂಕ ಎದುರಾಗಿದೆ. ಸಂಪೂರ್ಣ ರಸ್ತೆ ಕುಸಿದು ಬೀಳುವ ಮೊದಲು ಕಲ್ಲಿನ ಪಿಚ್ಚಿಂಗ್ ಹಾಕಿ ತಾತ್ಕಾಲಿಕ ದುರಸ್ತಿ ಅನಿವಾರ್ಯ.