ಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಯಾದಿ, ಯರಮುಖ, ತಮ್ಮಣಗಿ, ಶೇವಾಳಿ ಸೇರಿ ಹಲವು ಭಾಗದಲ್ಲಿ ಬೆಳೆದ ಅಡಿಕೆಗೆ (Areca) ವಿಪರೀತ ಪ್ರಮಾಣದಲ್ಲಿ ಕೊಳೆ ರೋಗ ಆವರಿಸಿದೆ. ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಯೋಗ್ಯ ಪರಿಹಾರ ವಿತರಿಸಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.
ಕರಿಯಾದಿ ಗಜಾನನ ದಾನಗೇರಿ ಅವರ ಅರ್ಧದಷ್ಟು ಅಡಿಕೆಗೆ ಕೊಳೆ ಬಂದಿದ್ದು ಲಕ್ಷಾಂತರ ರೂಪಾಯಿಗಳ ಅಡಿಕೆ ಬೆಳೆ ಹಾಳಾಗಿದೆ. ಸಾಲ ಮಾಡಿ ಅಡಿಕೆ ಬೆಳೆ ಬೆಳೆದು ಈಗ ಅಡಿಕೆಗೆ ಕೊಳೆ ಬಂದ ಕಾರಣ ರೈತರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಅಲ್ಲದೇ ಇದ್ದ ತೆಂಗಿನ ಕಾಯಿ, ಚಿಕ್ಕು, ಬಾಳೆ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟವೂ ಜೋರಾಗಿದೆ. ಕಾಳು ಮೆಣಸಿಗೂ ಕಟ್ಟೆ ರೋಗ ಪ್ರಾರಂಭವಾಗಿದ್ದು, ಎಲೆಗಳು ಹಳದಿಯಾಗಿ ಬಳ್ಳಿಗಳೇ ಸಾಯುತ್ತಿವೆ ಎಂದು ಅವರು ಅಳಲು ತೋಡಿಕೊಂಡರು.