ಮುಂಡಗೋಡ (Mundgod): ಬಸವನ ಹೊಂಡದಲ್ಲಿ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಎಂಬಾತರ ಶವ ಸಿಕ್ಕಿದೆ.
ಸೋಮವಾರ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸೈ ಪರಶುರಾಮ ಹಾಗೂ ಪೊಲೀಸರು ಅಲ್ಲಿಗೆ ಹೋಗಿ ಶವ ಹೊರತೆಗೆದಿದ್ದಾರೆ.
ಪರಿಶೀಲನೆ ನಡೆಸಿದ ನಂತರ ಅದು ಶಿವಾಜಿ ಶವ ಎಂದು ಗೊತ್ತಾಗಿದೆ. ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಲಾಗಿದೆ. ಆದರೆ, ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪೊಲೀಸ್ ತನಿಖೆ ಮುಂದುವರೆದಿದೆ.