
ಶಿರಸಿ (sirsi): ಹುಸುರಿಯ ಕೋಳಿ ಫಾರಂ\’ನಲ್ಲಿ ಕೆಲಸ ಮಾಡುವ ಕಳಕಪ್ಪಾ ಹುಲ್ಲೂರು (41) ಎಂಬಾತರಿಗೆ ಟಾಕ್ಟರ್ ಗುದ್ದಿದೆ. ಪರಿಣಾಮ ಅವರ ಜೊತೆ ಮಂಜುನಾಥ ಗೌಡ ಎಂಬಾತರು ಗಾಯಗೊಂಡಿದ್ದಾರೆ.
ಕಳಕಪ್ಪಾ ಹುಲ್ಲೂರು ಹುಸುರಿಯ ರಮ್ಯಾ ಪೋಟರಿ ಫಾರ್ಮ\’ನಲ್ಲಿ ಕೆಲಸ ಮಾಡುತ್ತಿದ್ದು, ಅಗಸ್ಟ 10ರಂದು ಮಂಜುನಾಥ ಹುಲಿಯಾ ಗೌಡ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೂವಿನ ಮಾಲೆ ತರಲು ಹೋಗಿದ್ದರು. ಕರಿಗುಂಡಿ ರಸ್ತೆ ಮೂಲಕ ಹುಸುರಿಗೆ ಹೋಗುತ್ತಿದ್ದಾಗ ನೊಂದಣಿ ಸಂಖ್ಯೆಯನ್ನು ಹೊಂದಿರದ ನೀಲಿ ಬಣ್ಣದ ಟಾಕ್ಟರ್ ಓಡಿಸಿಕೊಂಡು ಬಂದ ಮುಂಡಗೋಡದ ವೆಂಕಟೇಶ ರಾಮಾಪುರ ಎಂಬಾತ ಅವರ ಬೈಕಿಗೆ ಟಾಕ್ಟರ್ ಗುದ್ದಿದ್ದಾನೆ. ಪರಿಣಾಮ ಬೈಕ್ಸಹಿತ ಇಬ್ಬರು ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ.