ವಿದ್ಯುತ್ ತಂತಿಗಳ ನಿರ್ವಹಣೆ ಹಿನ್ನಲೆ ಕುಮಟಾ, ಹೊನ್ನಾವರ, ಮುರುಡೇಶ್ವರ ಹಾಗೂ ಭಟ್ಕಳದ ವಿವಿಧ ಕಡೆ ಅಗಸ್ಟ 14ರಂದು ವಿದ್ಯುತ್ ಸರಬರಾಜು ಇರುವುದಿಲ್ಲ.
ಅಂದು ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಹೆಸ್ಕಾಂ ಸಿಬ್ಬಂದಿ ನಿರ್ವಹಣೆ ಕೆಲಸ ಮಾಡಲಿದ್ದು, ಈ ಅವಧಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತ ಮಾಡಲಾಗುತ್ತದೆ ಎಂದು (Hescom announcements) ಹೆಸ್ಕಾಂ ತಿಳಿಸಿದೆ.
ಇದರೊಂದಿಗೆ ಅಂಕೋಲಾ-ಕುಮಟಾ ನಡುವಿನ ಕೆಲ ಭಾಗಗಳಲ್ಲಿ ಸಹ ವಿದ್ಯುತ್ ಸರಬರಾಜು ಇರುವುದಿಲ್ಲ. ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜುರು, ಓಂ ಬೀಚ್, ಗಂಗಾವಳಿ ಫೀಡರಿನ ಎಲ್ಲಾ ಭಾಗಗಳಲ್ಲಿ ಅದೇ ದಿನ ವಿದ್ಯುತ್ ತಂತಿ ನಿರ್ವಹಣೆ ನಡೆಯಲಿದೆ. ಸಂತೆಗುಳಿ, ಕಲ್ಲಬ್ಬೆ, ಹೊದ್ಕೆಶಿರೂರು, ಚಂದಾವರ ಹಾಗೂ ಮೂರುರು ಭಾಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.