ಸ್ವಾತಂತ್ರ್ಯೋತ್ಸವದ (Independence Day) ಅಮೃತ ಮಹೋತ್ಸವದ ಅಂಗವಾಗಿ ಆ 15ರವರೆಗೆ ನಡೆಯುವ \”ಹರ್ ಘರ್ ತಿರಂಗಾ\” ಅಭಿಯಾನದ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ಧ್ವಜಾರೋಹಣ ಮಾಡಿದ ಸೆಲ್ಪಿ ಫೋಟೋಗಳನ್ನು ಹಂಚಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಜಿಲ್ಲೆಯಾದ್ಯಂತ ದೇಶಪ್ರೇಮವನ್ನು ಅಭಿವ್ಯಕ್ತಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ. ಇದರೊಂದಿಗೆ ಆಗಸ್ಟ್ 15ರಂದು ಪ್ರತಿ ಮನೆ ಮನೆಯಲ್ಲೂ ಧ್ವಜಾರೋಹಣ ನಡೆಸಿ ತಿರಂಗ ಜೊತೆಗಿನ ಸೆಲ್ಫಿಯನ್ನು harghartiranga.com\’ನಲ್ಲಿ ಅಪ್ಲೋಡ್ ಮಾಡುವಂತೆ ಅವರು ಕರೆ ನೀಡಿದ್ದಾರೆ.
`ಸ್ಥಳೀಯವಾಗಿ ಆಯೋಜಿಸಲಾಗುವ ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು\’ ಎಂದು ಅವರು ಹೇಳಿದ್ದಾರೆ.
`ಆಗಸ್ಟ್ 13ರಂದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೈಕ್, ಸೈಕಲ್ ಜಾಥಾ ಮೂಲಕ ತಿರಂಗ ರ್ಯಾಲಿ ಆಯೋಜಿಸಬೇಕು, ಆಗಸ್ಟ್ 14ರಂದು ವಾಕಥಾನ್ ಮೂಲಕ ತಿರಂಗ ರ್ಯಾಲಿ ಮತ್ತು ರಂಗೋಲಿ ಚಿತ್ರದ ಮೂಲಕ ಅಭಿಯಾನ ಕೈಗೊಳ್ಳಬೇಕು\’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.