ಯಲ್ಲಾಪುರ: ಬಸ್ ನಿಲ್ದಾಣದಿಂದ ಬೆಲ್ ರಸ್ತೆಯವರೆಗೆ ಬಿದ್ದ ತ್ಯಾಜ್ಯ ಆರಿಸುತ್ತಿದ್ದ ಪೌರ ಕಾರ್ಮಿಕ ಲಕ್ಷ್ಮಣ ಆಯತ್ರಾ ಹರಿಜನ (53) ಎಂಬಾತರು ಸೋಮವಾರ ಹೃದಯಘಾತದಿಂದ (Heart attack) ಸಾವನಪ್ಪಿದ್ದಾರೆ.
ಭಾನುವಾರ ನಡೆದ ಸಂತೆಯಿoದ ಬೆಲ್ ರಸ್ತೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿತ್ತು. ಅಗಸ್ಟ 12ರ ಬೆಳಗ್ಗೆ ಪಟ್ಟಣ ಪಂಚಾಯತ ಪೌರ ಕಾರ್ಮಿಕರಾದ ದ್ಯಾಮಣ್ಣ ಮಾದರ್, ಮುತ್ತಲಯ್ಯ, ನಾಗರಾಜ ಕೋರಾರ್, ಶ್ರೀನಿವಾಸ ಮಾದರ್ ಜೊತೆ ಲಕ್ಷ್ಮಣ ಹರಿಜನ ಸಹ ತ್ಯಾಜ್ಯ ಆರಿಸುವ ಕೆಲಸಕ್ಕೆ ಹೋಗಿದ್ದರು. ಬುಟ್ಟಿಯಲ್ಲಿ ತುಂಬಿದ ತ್ಯಾಜ್ಯವನ್ನು ಟಾಕ್ಟರ್\’ಗೆ ಹಾಕುತ್ತಿದ್ದ ಅವರು `ತಲೆ ಸುತ್ತಿ ಬರುತ್ತಿದೆ\’ ಎಂದು ಹೇಳಿ ರಸ್ತೆ ಪಕ್ಕ ಕುಳಿತು ವಿಶ್ರಾಂತಿ ಪಡೆದಿದ್ದರು. ಆದರೆ, ಎಷ್ಟು ಹೊತ್ತು ಕಳೆದರೂ ಅಲ್ಲಿಂದ ಮೇಲೆ ಏಳಲಿಲ್ಲ.
ಇತರೆ ಪೌರ ಕಾರ್ಮಿಕರೆಲ್ಲರೂ ಸೇರಿ ಲಕ್ಷ್ಮಣರನ್ನು ಎಬ್ಬಿಸುವ ಪ್ರಯತ್ನ ನಡೆಸಿದರು. ಆಗಲೂ ಅವರು ಏನೂ ಮಾತನಾಡಲಿಲ್ಲ. ಎಚ್ಚರ ತಪ್ಪಿರಬಹುದು ಎಂದು ಭಾವಿಸಿ ಆಸ್ಪತ್ರೆಗೆ ದಾಖಲು ಮಾಡಿದರು. ಆಗ ಅಲ್ಲಿನ ವೈದ್ಯರು ಲಕ್ಷ್ಮಣ ಹರಿಜನ್ ಈಗಾಗಲೇ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಲಕ್ಷ್ಮಣ ಹರಿಜನ್ ತಮ್ಮ ಜೀವಿತ ಅವಧಿಯಲ್ಲಿ ಉದ್ಯಮನಗರದಲ್ಲಿ ವಾಸವಾಗಿದ್ದರು.