ಶಿರಸಿ (Sirsi): ಹುಲೆಕಲ್ ಬಸ್ ನಿಲ್ದಾಣ ಎದುರು `1 ರೂಪಾಯಿ ಕಟ್ಟಿ 80 ರೂಪಾಯಿ ಗೆಲ್ಲಿ\’ ಎಂದು ಕೂಗುತ್ತಿದ್ದ ವಿಜಯ ದಶರಥ ನಾಯ್ಕ (45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಸಿ ಗಾಂಧಿ ನಗರದ ವಿಜಯ ನಾಯ್ಕ ಕೂಲಿ ಕೆಲಸ ಮಾಡಿಕೊಂಡಿದ್ದು, ಒಮ್ಮೆಗೆ ಹೆಚ್ಚಿನ ಹಣಗಳಿಸುವ ಆಸೆಯಿಂದ ಜೂಜಾಟ ನಡೆಸಲು ಮುಂದಾಗಿದ್ದ. ಅಗಸ್ಟ 12ರ ಬೆಳಗ್ಗೆ ಹುಲೆಕಲ್ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಈತ ಮಟ್ಕಾ ಆಡಿಸುತ್ತಿದ್ದ. ದಾರಿಯಲ್ಲಿ ಹೋಗುವವರನ್ನು ಕರೆದು ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಆಮೀಷ ಒಡ್ಡಿದ್ದ. ಈ ರೀತಿ ಸಾಕಷ್ಟು ಜನರಿಂದ ಹಣ ಸಂಗ್ರಹಿಸಿದ್ದ.
ಪೊಲೀಸರು ದಾಳಿ ನಡೆಸಿದಾಗ ಈತ ಸಂಗ್ರಹಿಸಿದ್ದ 1200ರೂ ಹಣದ ಜೊತೆ ಸಿಕ್ಕಿಬಿದ್ದಿದ್ದಾನೆ. ಅಂಕಿ-ಸ0ಖ್ಯೆ ಬರೆಯಲು ಬಳಸಿದ್ದ 4 ಸಣ್ಣ ಸಣ್ಣ ಚೀಟಿ ಹಾಗೂ ಬಾಲ್ಪೆನ್ನನ್ನು ಸಹ ಪೊಲೀಸರು ಆತನಿಂದ ವಶಕ್ಕೆ ಪಡೆದಿದ್ದಾರೆ. ಪಿಸೈ ಸೀತಾರಾಮ ಪಿ ದಾಳಿಯ ನೇತ್ರತ್ವವಹಿಸಿದ್ದರು.