78ನೇ ಸ್ವಾತಂತ್ರ್ಯೋತ್ಸವದ (Independence day )ಅಂಗವಾಗಿ \”ಹರ್ ಘರ್ ತಿರಂಗ\” ಕಾರ್ಯಕ್ರಮದ ಅಡಿಯಲ್ಲಿ ಆಗಸ್ಟ್ 13ರಂದು ಬೆಳಗ್ಗೆ 7ಗಂಟೆಗೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ `ಸೈಕ್ಲೋತಾನ್\’ ನಡೆಯಲಿದೆ.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಸೈಕಲ್ ಹೊಂದಿದ ಶಾಲಾ ಮಕ್ಕಳು ಸೇರಿ ಯಾರೂ ಬೇಕಾದರೂ ಇದರಲ್ಲಿ ಭಾಗವಹಿಸಬಹುದು.