ಕುಮಟಾ: ಮಗನ ಭವಿಷ್ಯಕ್ಕಾಗಿ ಅಂಗಡಿ ಹಾಕಿಕೊಡಬೇಕು ಎಂದು ಯೋಜಿಸಿದ್ದ ಹಿರೆಗುತ್ತಿಯ ಪದ್ಮಾ ಸುಬ್ರಾಯ ಹಳ್ಳೇಕರ್ ಎಂಬಾತರಿಗೆ ಅದೇ ಊರಿನ ರಶ್ಮಿ ಮಂಜುನಾಥ ನಾಯಕ ಹಾಗೂ ಸುಪ್ರೀತ ರಾಜು ನಾಯಕ ಎಂಬಾತರು ವಿವಿಧ ಬ್ಯಾಂಕು ಹಾಗೂ ಸ್ವಸಹಾಯ ಸಂಘಗಳಿ0ದ ಸಾಲ ಕೊಡಿಸಿ, ಆ ಹಣವನ್ನು ಪಡೆದು (Cheating) ವಂಚಿಸಿದ್ದಾರೆ.
ಜೂನ್ 2023ರಲ್ಲಿರಲ್ಲಿ ಪದ್ಮಾ ಅವರನ್ನು ಗ್ರಾಮೀಣ ಒಕ್ಕೂಟ ಸ್ವ ಸಹಾಯ ಸಂಘಕ್ಕೆ ಕರೆದೊಯ್ದ ಆರೋಪಿತರು ಅಲ್ಲಿ 55 ಸಾವಿರ ಸಾಲ ಕೊಡಿಸಿದ್ದರು. ಆ ಹಣವನ್ನು ಪದ್ಮಾ ಅವರ ಹೆಸರಿನಲ್ಲಿರುವ ಮಾದನಗೇರಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಖಾತೆಗೆ ವರ್ಗಾಯಿಸಿದ್ದು, ಬ್ಯಾಂಕಿಗೆ ಕರೆದುಕೊಂಡು ಹೋಗಿ ಆ ಖಾತೆಯಲ್ಲಿದ್ದ 53625ರೂಪಾಯಿಯನ್ನು ನಗದು ರೂಪದಲ್ಲಿ ಪಡೆದಿದ್ದರು. ಈ ಹಣ `ಅಂಗಡಿಗೆ ಬಾಡಿಗೆಯ ಮುಂಗಡ\’ ಎಂದು ಈ ವೇಳೆ ನಂಬಿಸಿದ್ದರು.
ಇದಾದ ರಶ್ಮಿ ಮಂಜುನಾಥ ನಾಯಕ ಹಾಗೂ ಸುಪ್ರೀತ ರಾಜು ನಾಯಕ ಇಬ್ಬರೂ ಸೇರಿ ನವೆಂಬರ್ 2023ರಲ್ಲಿ ಪದ್ಮಾ ಅವರನ್ನು ಸ್ಪೂರ್ತಿ ಫೈನಾನ್ಸ್\’ಗೆ ಕರೆದೊಯ್ದು ಅಲ್ಲಿಯೂ ಸಾಲಪತ್ರಕ್ಕೆ ಸಹಿ ಹಾಕಿಸಿದ್ದರು. ಆ ಪ್ರಕಾರ 29 ಡಿಸೆಂಬರ್ 2023ರಂದು ಖಾತೆಗೆ ಜಮಾ ಆದ 40243ರೂ ಸಾಲ ಮೊತ್ತದ ಪೈಕಿ 30 ಸಾವಿರ ರೂಪಾಯಿಗಳನ್ನು `ಅಂಗಡಿಯ ಪೀಠೋಪಕರಣ ಖರೀದಿ\’ಗೆ ನಂಬಿಸಿ ರಶ್ಮಿ ನಾಯಕ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದರು.
2024ರ ಫೆ 6ರಂದು `ನಿಮ್ಮ ಅಂಗಡಿ ಸಿದ್ದವಾಗಿದ್ದು, ಅಲ್ಲಿನ ವ್ಯಾಪಾರಕ್ಕೆ ವಸ್ತುಗಳನ್ನು ಖರೀದಿಸಬೇಕು\’ ಎಂದು ನಂಬಿಸಿ ಇಂಡಿಸ್ ಇಂಡ್ ಬ್ಯಾಂಕಿನ ಮೂಲಕ ಪದ್ಮಾ ಅವರ ಬಳಿ ಸಾಲ ಮಾಡಿಸಿ, ಅದೇ ಬ್ಯಾಂಕಿನಲ್ಲಿ 47 ಸಾವಿರ ರೂ ನಗದು ಪಡೆದಿದ್ದರು. ಆದರೆ, ಇಷ್ಟು ದಿನ ಕಳೆದರೂ ಅವರು ಅಂಗಡಿಯನ್ನು ಕಾಣಿಸಿರಲಿಲ್ಲ. ವ್ಯಾಪಾರದ ವಿಷಯವನ್ನು ಮಾತನಾಡುತ್ತಿರಲಿಲ್ಲ.
ಈ ನಡುವೆ ಸ್ವ ಸಹಾಯ ಸಂಘ, ಬ್ಯಾಂಕ್ ಹಾಗೂ ಫೈನಾನ್ಸಿನವರ ಸಾಲ ಮರುಪಾವತಿಗಾಗಿ ಪದ್ಮಾ ಅವರಿಗೆ ಫೋನ್ ಬಂದಿದೆ. ಬಡ್ಡಿ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಅಂಗಡಿಯ ಬಗ್ಗೆ ಬಗ್ಗೆ ಪ್ರಶ್ನಿಸಿದಾಗ ರಶ್ಮಿ ಮಂಜುನಾಥ ನಾಯಕ ಹಾಗೂ ಸುಪ್ರೀತ ರಾಜು ನಾಯಕ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡಿದ್ದು, ತಮ್ಮ ಹೆಸರಿನಲ್ಲಾದ 140625ರೂ ಸಾಲ ಹಾಗೂ ಅದರ ಬಡ್ಡಿಯಿಂದಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪದ್ಮಾ ಹಳ್ಳೇಕರ್ ಪೊಲೀಸ್ ದೂರು ನೀಡಿದ್ದಾರೆ.
ಗೋಕರ್ಣ ಪೊಲೀಸರು (Gokarna Police) ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.