ಅಂಕೋಲಾ: ಪೂಜಗೇರಿಗೆ ತೆರಳುವ ರಸ್ತೆಯಲ್ಲಿ (Road Problems) ಸಾಕಷ್ಟು ಹೊಂಡ ಬಿದ್ದಿದೆ. ಇದರಿಂದ ಸಂಚಾರ ಅಸ್ತವ್ಯಸ್ಥವಾಗಿದ್ದು, ತಕ್ಷಣ ದುರಸ್ಥಿ ನಡೆಸದಿದ್ದಲ್ಲಿ ಪ್ರತಿಭಟಿಸುವುದಾಗಿ ಆ ಭಾಗದವರು ಎಚ್ಚರಿಕೆ ನೀಡಿದ್ದಾರೆ.
ಇದರೊಂದಿಗೆ `ಮಳೆ ಹೆಚ್ಚಾಗಿದ್ದರಿಂದ ಮಂಜಗುಣಿಯ ರಸ್ತೆಯ ಎರಡು ಇಕ್ಕೆಲುಗಳಲ್ಲಿ ಹೊಂಡ ಬಿದ್ದಿದ್ದು, ಅದನ್ನು ತಕ್ಷಣ ದುರಸ್ಥಿಗೊಳಿಸಬೇಕು\’ ಎಂದು ಆಗ್ರಹಿಸಿದ್ದಾರೆ. `ಮಂಜಗುಣಿ ಭಾಗದಲ್ಲಿ ರಸ್ತೆಯ ಎರಡು ಭಾಗದ ಅಂಚಿನಲ್ಲಿ ಮಣ್ಣು ಕೊರೆದು ಹೋಗಿದ್ದು, ಇದರಿಂದಾಗಿ ವಾಹನದವರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಮಂಜಗುಣಿ-ಗ0ಗಾವಳಿ ಸೇತುವೆಯಲ್ಲಿ ಸಂಚರಿಸಲು ಸಾಧ್ಯವಾಗಿದ್ದರಿಂದ ಕಾರ್, ದ್ವಿಚಕ್ರ ವಾಹನಗಳು ಓಡಾಟ ಹೆಚ್ಚಾಗಿದೆ\’ ಎಂದು ಸಮಸ್ಯೆ ವಿವರಿಸಿದರು.
ಲೋಕೋಪಯೋಗಿ ಇಂಜಿನೀಯರ ನಯನಾ ಎಂ ನಾಯ್ಕ ಊರಿನವರ ಮನವಿ ಆಲಿಸಿ ಹೊಂಡ ಮುಚ್ಚುವ ಭರವಸೆ ನೀಡಿದರು. ಹೊನ್ನೆಬೈಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಮಣ ಕೆ. ನಾಯ್ಕ, ಸದಸ್ಯರಾದ ನಾಗರಾಜ ರಾಯ್ಕರ, ಮಂಜುನಾಥ ಆರ್. ನಾಯ್ಕ, ಸ್ಥಳೀಯರಾದ ನಾಗರಾಜ ಮಂಜಗುಣಿ ಇತರರಿದ್ದರು.