ದಾಂಡೇಲಿ: ಪಾತಿಮಾ ಖಾಸಿಂ ಸಾಬ್ ನೀಲರಗಿ ಎಂಬಾತರಿಗೆ ಸುಭಾಶ ನಗರದ
ಅನ್ವರಸಾಬ ನೀರಲಗಿ ಹಾಗೂ ರೇಶ್ಮಾಭಾನು ನೀರಲಗಿ ಎಂಬಾತರು ಹಲ್ಲೆ (Attack) ನಡೆಸಿ ಕೈಗೆ ಚಾಕು ಇರಿದಿದ್ದಾರೆ.
ಅಗಸ್ಟ 12ರಂದು ಪಾತಿಮಾ ಖಾಸಿಂ ಸಾಬ್ ನೀಲರಗಿ ತಮ್ಮ ತಂಗಿ ಮನೆಯಲ್ಲಿದ್ದ ಸಾಮಾನು ಪಡೆಯುವುದಕ್ಕಾಗಿ ಸುಭಾಶನಗರಕ್ಕೆ ಹೋಗಿದ್ದರು. ಆಗ ಅನ್ವರಸಾಬ ನೀರಲಗಿ ಹಾಗೂ ರೇಶ್ಮಾಭಾನು ನೀರಲಗಿ ಅವರು ಅಲ್ಲಿ ಬಂದಿದ್ದನ್ನು ವಿರೋಧಿಸಿ ಹಲ್ಲೆ ಮಾಡಿದ್ದಾರೆ.
ಅವರ ಬಟ್ಟೆಗಳನ್ನು ಹರಿದು ಅವಮಾನ ಮಾಡಿದ್ದು, ನಂತರ ಚಾಕುವಿನಿಂದ ಕೈ ಕೊರೆದಿದ್ದಾರೆ. `ಮತ್ತೆ ನಮ್ಮ ಮನೆಗೆ ಬರಬೇಡ\’ ಎಂದು ಪಾತಿಮಾ ಅವರ ಪುತ್ರ ಅಬ್ದುಲ್ ರಜಾಕ್\’ಗೆ ಸಹ ತಾಕೀತು ಮಾಡಿದ್ದಾರೆ.