ಯಲ್ಲಾಪುರ: `ಹರ ಘರ ತಿರಂಗಾ ಅಭಿಯಾನ\’ದ (Tiranga abhiyan) ಅಂಗವಾಗಿ ಬಿಜೆಪಿಗರು ವಜ್ರಳ್ಳಿಯ ತೆಲಂಗಾರಿನಲ್ಲಿ `ಸ್ವಚ್ಛ ಭಾರತ\’ದ ಕೆಲಸವನ್ನು ಮಾಡಿದರು.
ಮಂಗಳವಾರ ತೆಲಂಗಾರಿಗೆ ತೆರಳಿದ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹಾಗೂ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರ ತಂಡದವರು ಅಲ್ಲಿ ಸ್ಥಾಪಿಸಲಾದ ಭಗತ ಸಿಂಗ್ ಪುತ್ಥಳಿ ಸ್ವಚ್ಛಗೊಳಿಸಿದರು. ಈ ವೇಳೆ ಸುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಆರಿಸಿದರು.
ಇದಾದ ನಂತರ ಶಾಲಾ ಮಕ್ಕಳ ಜೊತೆಗೂಡಿ ಬಿಜೆಪಿ ಪ್ರಮುಖರು ಭಗತ ಸಿಂಗ ಪುತ್ಥಳಿಗೆ ಮಾಲಾರ್ಫಣೆ ಮಾಡಿದರು. `ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ `ಹರ ಘರ ತಿರಂಗಾ ಅಭಿಯಾನ\’ ನಡೆಯುತ್ತಿದ್ದು ಇದರಲ್ಲಿ ಭಾಗಿಯಾಗಿರುವುದು ನಮ್ಮ ಹೆಮ್ಮೆ\’ ಎಂದು ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟರು.
ಪ್ರಮುಖರಾದ ಉಮೇಶ ಭಾಗ್ವತ, ವೆಂಕಟ್ರಮಣ ಬೆಳ್ಳಿ, ಜಿ ಎನ್ ಗಾಂವ್ಕರ್ ಸುಬ್ಬಣ್ಣ ಬೋಳ್ಮನೆ, ನವೀನ ಕಿರಗಾರೆ ದೀಪಕ ಭಟ್ಟ, ಸುರೇಶ ಮರಾಠಿ ಇತರರು ಇದ್ದರು.