ದಾOಡೇಲಿ: ಜನರನ್ನು ಕಂಡ ತಕ್ಷಣ ಎರಗಿ ಬರುತ್ತಿದ್ದ ಜಾನುವಾರನ್ನು (Animal trap) ನಗರಸಭೆಯವರು ಸೆರೆ ಹಿಡಿದಿದ್ದಾರೆ. ನಂತರ ಇದನ್ನು ಗೋ ಶಾಲೆಗೆ ಹಸ್ತಾಂತರಿಸಿದರು.
ತಿOಗಳ ಹಿಂದೆ ಸೆಂಡೆ ಮಾರ್ಕೆಟ್ ಬಳಿ ಈ ದನ ಒಬ್ಬನಿಗೆ ತಿವಿದು ಸಾಯಿಸಿತ್ತು. ಅದಾದ ನಂತರವೂ ಕಂಡ ಕಂಡವರ ಮೇಲೆ ಎರಗಿ ಬರುತ್ತಿತ್ತು. ಹತ್ತಿರ ಹೋದರೆ ಕೋಡು ಮುಂದೆ ಮಾಡಿ ಮುನ್ನುಗ್ಗುತ್ತಿದ್ದು, ಇದರಿಂದ ಜನ ಭಯಗೊಂಡಿದ್ದರು.
ನಗರದ ಲಿಂಕ್ ರಸ್ತೆಯಲ್ಲಿ ಓಡಾಡುವ ಜನರ ಪಾಲಿಗೆ ಈ ಜಾನುವಾರು ಸಮಸ್ಯೆಯಾಗಿದ್ದು, ಅದನ್ನು ಸೆರೆಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಹಿನ್ನಲೆ ನಗರಸಭೆ ಪೌರಾಯುಕ್ತ ಆರ್.ಎಸ್.ಪವಾರ್ ಕಾರ್ಯಾಚರಣೆಗಿಳಿದಿದ್ದರು. ನಗರ ಸಭೆಯ ಆರೋಗ್ಯ ನಿರೀಕ್ಷಕ ವಿಲಾಸ್ ದೇವಕರ ತಂಡ ರಚಿಸಿಕೊಂಡು ಪೌರಕಾರ್ಮಿಕರ ಮೇಲ್ವಿಚಾರಕ ಶ್ರೀನಿವಾಸರರ ನೆರವಿನಿಂದ ಆ ಜಾನುವಾರನ್ನು ಅದನ್ನು ಬಂಧಿಸಿದರು.
ನಗರಸಭೆ ಆವರಣದಲ್ಲಿ ದನವನ್ನು ಕಟ್ಟಲಾಗಿದ್ದು, ನಂತರ ಹಳಿಯಾಳದ (Haliyal) ದುಸಗಿಯ ಗೋಶಾಲೆಗೆ ಹಸ್ತಾಂತರಿಸಲಾಯಿತು.