ಶಿರಸಿ: ಸ್ವಾತಂತ್ರ್ಯೋತ್ಸವದ (independence day) ಅಂಗವಾಗಿ ಸಂವಿಧಾನದ ಆಶಯ ಹಾಗೂ ಬಹುತ್ವ ಭಾರತ ಕುರಿತು ನಗರದ `ಅನೇಕ\’ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಪ್ರಥಮ ಸ್ಥಾನವನ್ನು ಹುಲೇಕಲ್ ಶ್ರೀದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಲಾವಣ್ಯ ಭಾಸ್ಕರ ನಾಯ್ಕ ಹಾಗೂ ಕಲ್ಲಿಯ ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ ಮಧುರಾ ರಮೇಶ ಮಡಿವಾಳ, ದ್ವಿತೀಯ ಸ್ಥಾನವನ್ನು ಹೊನ್ನಾವರ (Honnavar) ಇಡಗುಂಜಿ ಸರಕಾರಿ ಪಿಯು ಕಾಲೇಜಿನ ಸುಬ್ರಹ್ಮಣ್ಯ ಶ್ರೀಧರ ನಾಯ್ಕ ಹಾಗೂ ಲಯನ್ಸ್ ಪಿಯು ಕಾಲೇಜಿನ ಸೌಖ್ಯ ವಿನಾಯಕ ಹೆಗಡೆ ಪಡೆದಿದ್ದಾರೆ.
ತೃತೀಯ ಸ್ಥಾನವನ್ನು ಗೋರೆ ಕಾಲೇಜಿನ ಪ್ರಣತಿ ಮಹೇಶ ಹೆಗಡೆ ಪಡೆದಿದ್ದಾರೆ. ಸಮಾಧಾನಕರ ಬಹುಮಾನವನ್ನು ಕಾರವಾರದ (Karwar) ಸರಕಾರಿ ಪಿಯು ಕಾಲೇಜಿನ ಭೂಮಿ ಬಸವರಾಜ ಪಾಟೀಲ, ನಿಲೇಕಣಿ ಕಾಲೇಜಿನ ಇಷ್ರತ್ ಮ ಚನ್ನಾಪುರ ಪಡೆದಿದ್ದಾರೆ. ಆ.15ರ ಮಧ್ಯಾಹ್ನ 3.30ಕ್ಕೆ ಶ್ರೀ ಮಾರಿಕಾಂಬಾ ಪದವಿ ಪೂರ್ವ ಕಾಲೇಜು ಶಿರಸಿ (Sirsi) ಇಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ಸಂಚಾಲಕ ಉಮೇಶ ನಾಯ್ಕ ತಿಳಿಸಿದ್ದಾರೆ.