ಅಂಕೋಲಾ ತಾಲೂಕಿನ ಶಿರೂರು (Shiruru) ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾಗಿದ್ದ ಕೇರಳದ ಅರ್ಜುನ ಓಡಿಸುತ್ತಿದ್ದ ಲಾರಿಯ ಕುರುಹು ಪತ್ತೆಯಾಗಿದೆ.
ಮಂಗಳವಾರ ಬಿಸಿಲು ಬಿದ್ದ ಹಿನ್ನಲೆ ಮುಳುಗು ತಜ್ಞ ಈಶ್ವರ ಮಲ್ಪೆ ಶಿರೂರಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಲಾರಿಯ ಒಂದು ತುಂಡು ಕಾಣಿಸಿದೆ. ಭಾರತ್ ಬೇಂಜ್ ಲಾರಿಯ ವೀಲ್ ಜಾಕ್ ಇದಾಗಿರುವುದು ಖಚಿತಗೊಂಡಿದ್ದು, 28ದಿನಗಳ ಬಳಿಕ ಲಾರಿಯ ಒಂದು ಅವಶೇಷ ಮಾತ್ರ ದೊರೆತಿದೆ. `ಈ ವೀಲ್ ಜಾಕ್ ತನ್ನ ಲಾರಿಯದ್ದು\’ ಎಂದು ಲಾರಿ ಮಾಲಕ ಸಹ ಖಚಿತಪಡಿಸಿದ್ದಾರೆ. ಹೀಗಾಗಿ ಅದೇ ಭಾಗದ ಅನತಿ ದೂರದಲ್ಲಿ ಲಾರಿ ಇರುವ ಬಗ್ಗೆ ಅಂದಾಜಿಸಲಾಗಿದೆ.
ಈಶ್ವರ ಮಲ್ಪೆ ತಂಡದವರು ಮಂಗಳವಾರ ಬೆಳಗ್ಗೆಯೇ ಆಗಮಿಸಿದ್ದರು. ಆದರೆ, ಶೋಧ ಕಾರ್ಯಾಚರಣೆಗೆ ಅನುಮತಿ ಸಿಕ್ಕಿರಲಿಲ್ಲ. ಶಾಸಕ ಸತೀಶ್ ಸೈಲ್ ಆಗಮಿಸಿ ಅನುಮತಿ ಕೊಡಿಸಿದ್ದು, ನಂತರ ನೀರಿಗೆ ಇಳಿದು ಹುಡುಕಾಟ ನಡೆಸಿದರು. ನಂತರ ನದಿ ಆಳದಲ್ಲಿದ್ದ ಬಾರದ ಲೋಹವನ್ನು ಅವರು ಹೊರ ತಂದರು.