ಹೊನ್ನಾವರ: ಹಬ್ಬಿನಕೇರಿ ಉಂಚಗೇರಿಯವರಾದ ದೀಪಾ ಸುಬ್ರಹ್ಮಣ್ಯ ಭಟ್ಟ (44) ಅವರ ಮನೆಯಲ್ಲಿ ಕಳ್ಳತನ (Theft) ನಡೆದಿದೆ.
ದೀಪಾ ಅವರು ಸಿಹಿ ತಿನಿಸುಗಳ ವ್ಯಾಪಾರಿ. ಅಗಸ್ಟ 12ರಂದು ಮಧ್ಯಾಹ್ನ ಮನೆಯಿಂದ ಅವರು ಹೊರ ಹೋಗಿದ್ದರು. ಸಂಜೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆ ಹಿಂದಿನ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಜೊತೆಗೆ ಮನೆಯಲ್ಲಿದ್ದ ಹಣವನ್ನು ಸಹ ಎಗರಿಸಿದ್ದಾರೆ. 15 ಸಾವಿರ ರೂ ನಗದು ಜೊತೆ 3.58 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳು ಕಳ್ಳರ ಪಾಲಾಗಿದೆ.