ದಾಂಡೇಲಿಯ ಅಂಬೇವಾಡಿಯಲ್ಲಿರುವ ಡಾ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ (Hostel students) ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದು, ಶಾಲೆಗೆ ಭೇಟಿ ನೀಡಿದ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಸತೀಶ ಪೂಜಾರಿ ಅಲ್ಲಿನ ವಿದ್ಯಾರ್ಥಿಗಳ ಅಳಲು ಆಲಿಸಿದರು.
ಈ ವೇಳೆ ಅಲ್ಲಿದ್ದ ಹಲವರು ವಸತಿ ಶಾಲೆಯ ಬಗ್ಗೆ ದೂರಿದರು. `ಮಕ್ಕಳಿಗೆ ಗುಣಮಟ್ಟದ ಊಟ ಉಪಹಾರವನ್ನು ನೀಡಬೇಕು. ಶೈಕ್ಷಣಿಕ ಹಿನ್ನಡೆ ಆಗದಂತೆ ಎಚ್ಚರಿಕೆವಹಿಸಬೇಕು\’ ಎಂದು ಸಿಬ್ಬಂದಿಗೆ ಅವರು ಸೂಚಿಸಿದರು. ವಾರ್ಡನ್ ಸೇರಿದಂತೆ ಸಹಾಯಕ ಸಿಬ್ಬಂದಿ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.
ತಹಶೀಲ್ದಾರ್ ಶೈಲೇಶ ಪರಮಾನಂದ ಇತರರು ಇದ್ದರು.