ಜಿಯೋ (Jio network) ಕಂಪನಿಯ ಟವರ್\’ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳರ ಪಾಲಾಗಿದೆ. ಮುಂಡಗೋಡಿನ ರಾಮಾಪುರದಲ್ಲಿ ಜಿಯೋ ಟವರ್ ತಳಭಾಗದ ಗೂಡಿನಲ್ಲಿದ್ದ 3.50 ಲಕ್ಷ ರೂ ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ದೋಚಿದ್ದಾರೆ. ಈ ಹಿನ್ನಲೆ ವಿದ್ಯುತ್ ಸರಬರಾಜು ಸ್ಥಗಿತವಾದಾಗ ಜಿಯೋ ಟವರ್ ಕೆಲಸ ಮಾಡುತ್ತಿಲ್ಲ!
ಈ ಒಂದು ಟವರ್\’ನಿಂದ ಹಲವು ಟವರ್\’ಗಳಿಗೆ ಸಂಪರ್ಕವಿದ್ದು, ಇಲ್ಲಿನ ಬ್ಯಾಟರಿ ಕಳ್ಳತನವಾಗಿದ್ದರಿಂದ ಇತರೆ ಟವರ್\’ಗಳಿಗೆ ಸಹ ಸಮಸ್ಯೆಯಾಗಿದೆ. ಇದರಿಂದ ಅಂದಾಜು 10 ಸಾವಿರಕ್ಕೂ ಅಧಿಕ ಗ್ರಾಹಕರು ನೆಟ್ವರ್ಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಜಿಯೋ ಟವರ್ ಸುತ್ತಲು ಗೇಟ್ ಅಳವಡಿಸಲಾಗಿತ್ತು. ಅದಕ್ಕೆ ಬೀಗವನ್ನು ಹಾಕಲಾಗಿತ್ತು. ಆದರೆ, ಬೀಗ ಒಡೆದು ಒಳನುಗ್ಗಿದ ಕಳ್ಳರು ಬ್ಯಾಟರಿ ಅಳವಡಿಸಿದ ಬಾಕ್ಸಿನ ಬೀಗವನ್ನು ಮುರಿದು ಅಲ್ಲಿದ್ದ 5 ಬ್ಯಾಟರಿ ಕದ್ದಿದ್ದಾರೆ. ಜುಲೈ 4ರಂದು ಕಂಪನಿಯ ಟೆಕ್ನಿಶಿಯನ್ ಬ್ಯಾಟರಿ ಸ್ಥಿತಿ ಗತಿ ಪರಿಶೀಲಿಸಿದ್ದರು. ಜುಲೈ 7ರಂದು ಮತ್ತೆ ಅಲ್ಲಿಗೆ ತೆರಳಿದಾಗ ಬ್ಯಾಟರಿ ಕಳ್ಳತನ ನಡೆದಿರುವುದು ಗೊತ್ತಾಗಿದೆ.
`Vision tech ಕಂಪನಿಯ 100Ah ಸಾಮರ್ಥ್ಯದ ಬ್ಯಾಟರಿಗಳು ಇದಾಗಿದ್ದವು. ಈ ಬ್ಯಾಟರಿ ಕಳ್ಳತನದಿಂದ ಹಲವರಿಗೆ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿದೆ\’ ಎಂದು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಜಿಯೋ ಕಂಪನಿಯ ಹನುಮಂತ ಗೌಡ ಶೀಲವಂತರ (46) ಮಾಹಿತಿ ನೀಡಿದರು.