ಯಲ್ಲಾಪುರ ಮೀನು ಮಾರುಕಟ್ಟೆ ಬಳಿಯಿದ್ದ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ 15 ಸಾವಿರ ರೂ ಹಣ ದೋಚಿ (Theft) ಪರಾರಿಯಾಗಿದ್ದಾರೆ.
ಶಾರದಾಗಲ್ಲಿಯ ರವಿ ನಾಗಪ್ಪ ಶೆಟ್ಟಿ ಎಂಬಾತರು ಇಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅಗಸ್ಟ 13ರ ರಾತ್ರಿ ವ್ಯಾಪಾರ ಮುಗಿಸಿ ಅವರು ಮನೆಗೆ ಹೋಗಿದ್ದರು. ಮನೆಗೆ ಹೋಗುವ ಮುನ್ನ ಅಂಗಡಿಗೆ ಬೀಗ ಹಾಕಿದ್ದು, ಅದೇ ರಾತ್ರಿ ಅಲ್ಲಿಗೆ ಬಂದ ಕಳ್ಳರು ಅಂಗಡಿ ಹಿಂದಿನ ಕೋಣೆಯ ಬಳಿ ಹೋಗಿದ್ದಾರೆ. ಅಲ್ಲಿನ ಮೇಲ್ಚಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್ ತೆಗೆದು ಒಳಗೆ ಪ್ರವೇಶಿಸಿದ್ದಾರೆ. ನಂತರ ಪೂರ್ತಿ ಅಂಗಡಿಯನ್ನು ತಡಕಾಡಿದ್ದಾರೆ.
ಆಗ ಅಂಗಡಿಯ ಡ್ರಾವರಿನಲ್ಲಿ 15 ಸಾವಿರ ರೂ ಸಿಕ್ಕಿದ್ದು, ಅದನ್ನು ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅಗಸ್ಟ 14ರ ಬೆಳಗ್ಗೆ ಅಂಗಡಿಗೆ ಬಂದ ಶೆಟ್ಟರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಆಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಳ್ಳರನ್ನು ಪತ್ತೆ ಮಾಡಿ ತಮ್ಮ ಹಣ ಹಿಂತಿರುಗಿಸುವ0ತೆ ಕೋರಿ ಪ್ರಕರಣ ದಾಖಲಿಸಿದ್ದಾರೆ.