ಅಳಿವಿನ ಅಂಚಿನಲ್ಲಿರುವ ಸಾಂಪ್ರದಾಯಿಕ ಭತ್ತಗಳ (Paddy) ತಳಿಗಳ ಸಂವರ್ಧನೆಗಾಗಿ ಶಿರಸಿಯ ಉಂಚಳಿಯಲ್ಲಿ ಆ 17ರಂದು `ನಾಟಿ ಹಬ್ಬ\’ ಆಯೋಜಿಸಲಾಗಿದೆ ಎಂದು ಸ್ಕೊಡ್ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಹಜ ಹಾಗೂ ಸಾವಯವ ಕೃಷಿ ಪದ್ಧತಿ ಉತ್ತೇಜನಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ\’ ಎಂದರು.
`ನಾವು ಬೆಳೆಯುವ ಬೆಳೆ ಲಾಭಕ್ಕಿಂತ ಉತ್ಪಾದಕ ವೆಚ್ಚವೇ ಅಧಿಕವಾಗಿದ್ದು, ಬೆಳೆದಂತ ವಸ್ತುಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲ. ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎನ್ನುವ ಅಭಿಪ್ರಾಯ ರೈತರಿಂದ ಮೂಡಿಬರುತ್ತಿದೆ. ಆದರೆ ಕೃಷಿ ಇಲ್ಲದೇ ನಮ್ಮ ಬದುಕು ಇಲ್ಲ ಎನ್ನುವುದೂ ಸತ್ಯ. ಇದನ್ನು ಮನವರಿಕೆ ಮಾಡುವ ಪ್ರಯತ್ನ ಇದಾಗಿದೆ\’ ಎಂದರು.
`ಈಗಾಗಲೇ 22ಕ್ಕೂ ಹೆಚ್ಚಿನ ವಿವಿಧ ಬಗೆಯ ಭತ್ತದ ಬೀಜಗಳ ಸಸಿ ಮಾಡಲಾಗಿದ್ದು, ಇವು ಈಗ ನಾಟಿಗೆ ಸಿದ್ದವಾಗಿದೆ. ಈ ಸಸಿಗಳನ್ನು ಪ್ರತ್ಯೇಕ-ಪ್ರತ್ಯೇಕ ಭಾಗಗಳಲ್ಲೇ ನಾಟಿ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ತಳಿಯ ಭತ್ತದ ಬೀಜಗಳು ರೈತರಿಗೆ ಲಭ್ಯವಾಗುವ ಉದ್ದೇಶದಿಂದ ಸೀಡ್ ಬ್ಯಾಂಕ್ ಮಾಡಲಾಗುತ್ತಿದೆ\’ ಎಂದು ತಿಳಿಸಿದರು.