ಆಹಾರ ಅರೆಸಿ ನಾಡಿಗೆ ಬಂದ ಜಿಂಕೆಯನ್ನು (Deer) ಹಿಡಿದ ಮುಂಡಗೋಡಿನ ಸನವಳ್ಳಿಯ ಜನ ಅದಕ್ಕೆ ಮೂಗುದಾರ ಹಾಕಿ ನೀರು ಕುಡಿಸಿದ್ದಾರೆ. ನಂತರ ಅದನ್ನು ಕಾಡಿಗೆ ಅಟ್ಟಿದ್ದಾರೆ. ಜನ ಜಂಗಳಿಗೆ ಬೆದರಿದ ಜಿಂಕೆ ಕಾಡು ಕಂಡ ತಕ್ಷಣ ಓಡಿ ಹೋಗಿದೆ!

ಸನವಳ್ಳಿ ಗ್ರಾಮಕ್ಕೆ ಗುರುವಾರ ಬೆಳಗ್ಗೆ ಚಿಂಕೆ ಪ್ರವೇಶಿಸಿದ್ದು, ಇದನ್ನು ನೋಡಿದ ಅಲ್ಲಿನ ಬೀದಿ ನಾಯಿಗಳು ಬೆನ್ನಟ್ಟಿದ್ದವು. ನಾಯಿ ದಾಳಿಯಿಂದ ತಪ್ಪಿಸಿದ ಜನ ನಿತ್ರಾಣಗೊಂಡ ಜಿಂಕೆಯನ್ನು ಹಿಡಿಯುವ ಪ್ರಯತ್ನ ಮಾಡಿದರು. ಜನರ ಗುಂಪು ನೋಡಿದ ಜಿಂಕೆ ಓಡಲು ಶುರು ಮಾಡಿದ್ದು ಆಗ ಕೆಲವರು ಸುತ್ತುವರೆದು ಅದನ್ನು ಹಿಡಿದರು. ನಂತರ ಕೋಡಿನಿಂದ ಮೂಗಿನವರೆಗೆ ಹಗ್ಗ ಹಾಕಿ, ಅದಕ್ಕೆ ನೀರು ಕುಡಿಸಿದರು!
ತಾವು ಮಾಡಿದ ಸಾಹಸದ ಪುಣ್ಯ ಕೆಲಸದ ಸಾಕ್ಷಿಗಾಗಿ ಫೋಟೋ ತೆಗೆಸಿಕೊಂಡರು. ಜನರ ಸದ್ದು ಗದ್ದಲಕ್ಕೆ ಬೆದರಿದ ಚಿಂಕೆ ಕಾಡಿನ ಕಡೆ ಜಿಂಕೆ ಓಡಿತು.