ಶಿರೂರು (Shiruru) ಗುಡ್ಡ ಕುಸಿತದಿಂದ ಸಂತ್ರಸ್ತರಾದ ಉಳುವರೆ ಗ್ರಾಮದವರಿಗೆ ಕುಮಟಾ, ಗೋಕರ್ಣ ಹಾಗೂ ಹೊನ್ನಾವರದ ಬ್ರಹ್ಮಕುಮಾರಿಯರು ನೆರವು ನೀಡಿದ್ದಾರೆ. ಅಲ್ಲಿಗೆ ಭೇಟಿ ಮಾಡಿದ ಅವರು ಅಗತ್ಯವಿರುವ ಪಾತ್ರೆಗಳನ್ನು ವಿತರಿಸಿದರು.
ಬ್ರಹ್ಮಕುಮಾರಿ ರಾಜಯೋಗಿನಿ ಗೀತಕ್ಕ `ದುರ್ಘಟನೆಯಿಂದ ಎಲ್ಲವನ್ನು ಕಳೆದುಕೊಂಡ ನೋವಿನಿಂದ ಹೊರಬಂದು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಪರಮಾತ್ಮನ ಆಶ್ರಯದಲ್ಲಿ ಪುನಃ ಜೀವನ ನಿರ್ಮಾಣ ಮಾಡಿಕೊಳ್ಳಲು ಕಾರ್ಯಶೀಲರಾಗಿ\’ ಎಂದು ಕರೆ ನೀಡಿದರು. ಬ್ರಹ್ಮಕುಮಾರಿ ಉಷಕ್ಕ ಮಾತನಾಡಿದರು. ಬ್ರಹ್ಮಕುಮಾರಿಯರಾದ ಗೀತಾ ಬೈಲಕೇರಿ, ಸುವರ್ಣ ಇತರರಿದ್ದರು.